ಗುರುಪುರ: ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ. 7ರವರೆಗೆ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಡಮರುಗ ಮ್ಯೂಸಿಕಲ್ಸ್ ಸೌಂಡ್ಸ್ ಅರ್ಪಿಸುವ ಗುರುಪುರ ಸುಧೀರ್ ಕಾಮತ್ ನಿರ್ಮಾಣದ. , ಪ್ರಸಾದ್ ಕೊಲಂಬೆ ಸಂಕಲನ, ಸಾಹಿತ್ಯ ತುಳುನಾಡ ಕಲಶ ಶ್ರೀ ಜಿ.ಎಸ್, ವಿ.ಜೆ.ಮಧುರಾಜ್ , ಮತ್ತು ಚೈತ್ರ ಗಾಣಿಗ ಹಾಡಿದ “ಧರ್ಮದ ಬೊಲ್ಪು” ಲೋಕಾರ್ಪಣೆ ನಡೆಯಿತು.

ಪ್ರಮೋದ್ ಕುಮಾರ್ ರೈ ದೊಣಿಂಜೆಗುತ್ತು ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಕಿಟ್ಟಣ್ಣ ರೈ, ಸದಾನಂದ ಗಾಂಭೀರ್, ಪುರುಷೋತ್ತಮ ಮಲ್ಲಿ, ವಿನಯ ಶೆಟ್ಟಿ,ಚಂದ್ರಾಹಾಶ ಪೂಜಾರಿ, ತನಿಯಪ್ಪ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

