ಬಡಗಬೆಳ್ಳೂರು : ಶಿಥಿಲಾವಸ್ಥೆಯಲ್ಲಿರುವ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಆರಾಧನಾ ಕೇಂದ್ರ ಶ್ರೀ ಮಹಮ್ಮಾಯಿ ದೇವಸ್ಥಾನದ ಬಗ್ಗೆ 2015ರಲ್ಲಿ ಪ್ರಶ್ನೆ ಇಟ್ಟು ಕೇಳಲಾದ ಪ್ರಕಾರ, ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿತ್ತು.
ಕಳೆದ ಮೂರು ವರ್ಷಗಳಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ನಿರೀಕ್ಷಿತ ದೇಣಿಗೆ ಸಂಗ್ರಹವಾಗದ್ದರಿಂದ ಕಾಮಗಾರಿ ಆರಂಭಗೊಂಡಿಲ್ಲ. ಆದರೆ ಕಾಮಗಾರಿಗಾಗಿ 20 ಲಕ್ಷ ರೂ ವೆಚ್ಚದ ಮರ ಹಾಗೂ ಶಿಲೆ ಕಲ್ಲು ಸಂಗ್ರಹಿಸಲಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ದೆಸೆಯಲ್ಲಿ ಕಳೆದ ವರ್ಷ ಡಿಸೆಂಬರ್ 18ರಂದು ಮತ್ತೊಮ್ಮೆ ಊರವರ ಸಭೆ ಕರೆದು ಜನವರಿ 20ರಂದು ಬೆಳಿಗ್ಗೆ 9.30ಕ್ಕೆ ದೇವರಗುಡಿಯಲ್ಲಿ ಸಂಕೋಚ ನಡೆಸಿ ಬಾಲಾಲಯದಲ್ಲಿ ದೇವರ ಪ್ರತಿಷ್ಠಾಪನೆಗೆ ನಿರ್ಧಸಲಾಗಿದೆ.
ದೇವಾಲಯದ ಜೀರ್ಣೋದ್ಧಾರಕ್ಕೆ ಊರಿನ ಭಕ್ತರ ದೇಣಿಗೆಯೇ ತಳಹದಿಯಾಗಿದೆ. ಹಾಗಾಗಿ ಊರಿನ ಪ್ರತಿ ಮನೆಯವರು ತಲಾ 10,000 ರೂನಿಂದ 25,000 ರೂ ಮೇಲ್ಪಟ್ಟ ದೇಣಿಗೆ ನೀಡುವಂತೆ ವಿನಂತಿಸಲಾಗಿದೆ. ಉಳಿದಂತೆ ದಾನಿಗಳು ಇಚ್ಚಿಸಿದಲ್ಲಿ ದೇವಾಲಯ ಜೀರ್ಣೋದ್ಧಾರದಲ್ಲಿ ಯಾವುದಾದರೂ ಕಾಮಗಾರಿಯ ಪೂರ್ಣ ಆರ್ಥಿಕ ಜವಾಬ್ದಾರಿ ತೆಗೆದುಕೊಳ್ಳಲು ಅವಕಾಶವಿದೆ.
