ಕಾರ್ಕಳ: ದಲಿತ ಯುವತಿಯೊಬ್ಬಳ ಅತ್ಯಾಚಾರಗೈದು ತಲೆಮರೆಸಿಕೊಂಡಿದ್ದ ಆರೋಪಿ ಕಾರ್ಕಳ ಕಲ್ಯಾ ನಿವಾಸಿ ಪ್ರದೀಪ್(26) ಎಂಬಾತನನ್ನು ಪೊಲೀಸರು ಉಡುಪಿಯ ಬಾರ್ವೊಂದರಲ್ಲಿ ಬಂಧಿಸಿದ ಸಿನೀಮೀಯ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.

ಈತ ಉಡುಪಿ ಕರಾವಳಿ ಬೈಪಾಸ್ ಪರಿಸರದ ಗಂಗೋತ್ರಿ ಬಾರ್ಗೆ ಎಂದಿನಂತೆ ಕೆಲಸದಲ್ಲಿ ತಲ್ಲೀನನಾಗಿದ್ದನು. ಆಗ ರಾತ್ರಿ ಪೊಲೀಸ್ ತಂಡ ತಡ ರಾತ್ರಿ ವೇಳೆಗೆ ದುಡಿಯುತ್ತಿದ್ದ ಬಾರ್ಗೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಆತ ಬುಧವಾರ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಒಂದು ಗಂಟೆಯ ಮುಂಚಿತವಾಗಿ ಅದೇ ಪರಿಸರದಲ್ಲಿ ಮತ್ತೊಂದು ಯುವತಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿರುವ ಅಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
