ಉಡುಪಿ: ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿ ನಿನ್ನೆಯಿಂದ ಇಂದಿನ ತನಕ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಮುಂದಿನ ಬಾರಿ ದಾಖಲೆಯ ಐದನೆಯ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉತ್ತರ ಭಾರತದ ಯಾತ್ರೆಯಲ್ಲಿದ್ದು ಶ್ರೀಕೃಷ್ಣ ಅವತರಿಸಿದ ಮಥುರಾ ಕ್ಷೇತ್ರದಲ್ಲಿ ಕೃಷ್ಣಾಷ್ಟಮಿಯನ್ನು ಆಚರಿಸಿದರು.

udp+

udp1

udp2

udp3

udp4

udp5

udp7

udp8

ುಪ

 

ಉಡುಪಿಯ ಸಂಭ್ರಮಕ್ಕಾಗಿ ನಾಡಿನೆಲ್ಲೆಡೆಯಿಂದ ಭಕ್ತರು ಬಂದು ದೇವರ ದರ್ಶನ ಪಡೆದರು. ಮಳೆಯ ಕಾರಣದಿಂದ ಉದ್ದದ ಸರತಿಸಾಲು ಕಂಡುಬರಲಿಲ್ಲ. ಬೆಳಗ್ಗೆ ಕೃಷ್ಣ ಮಠದ ಪರಿಸರದಲ್ಲಿ ಮುದ್ದುಕೃಷ್ಣರು ಸ್ಪರ್ಧೆಗಾಗಿ ರಾರಾಜಿಸಿದರು.  ಶ್ರೀಕೃಷ್ಣ ಮಠದಲ್ಲಿ ಏಕಾದಶಿ ಯಂತೆ ನಿರ್ಜಲ ಉಪವಾಸವಿರುವ ಕಾರಣ ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ರಾತ್ರಿಯೂ ಶ್ರೀಕೃಷ್ಣನಿಗೆ ತುಳಸೀ ಅರ್ಚನೆ ನಡೆಸಿ ಮಹಾಪೂಜೆ ಸಲ್ಲಿಸಿದರು (ಆಹಾರ ಸ್ವೀಕಾರದ ಬಳಿಕ ವಿಗ್ರಹವನ್ನು ಮುಟ್ಟುವುದಿಲ್ಲ. ಇದು ಪರ್ಯಾಯದ ಹೊರತಾಗಿ ಪಟ್ಟದ ದೇವರ ವಿಗ್ರಹದ ಪೂಜೆಗೂ ಅನ್ವಯ). ಮಧ್ಯರಾತ್ರಿ ವೇಳೆ ಶ್ರೀಪಾದರು ಕೃಷ್ಣಾಘÂì ಪ್ರದಾನ ಮಾಡಿದರು. ಅನಂತರ ಭಕ್ತ ಜನಸ್ತೋಮ ಕೃಷ್ಣಾಘÂì ಪ್ರದಾನ ಮಾಡಿತು. ಪೂರ್ವಾಹ್ನದ ವೇಳೆ ಮಳೆ ಬಂದ ಕಾರಣ ಜನಸಂದೋಹಕ್ಕೆ ಸ್ವಲ್ಪ ತಡೆಯಾಯಿತು. ಅಪರಾಹ್ನ ಬಿಸಿಲು ಇದ್ದ ಕಾರಣ ಭಕ್ತರ ಆಗಮನಕ್ಕೆ ಅನುವು ಆಯಿತು.

By suddi9

Leave a Reply

Your email address will not be published. Required fields are marked *