ಗುರುಪುರಕ್ಕೆ ಹತ್ತಿರದ ಮಾಣಿಬೆಟ್ಟುವಿನಲ್ಲಿ ಶ್ರೀ ಕೋರ್ದಬ್ಬು ಪರಿವಾರ ದೈವಗಳಿಗೆ ನೂತನ ದೈವಾಲಯ ನಿರ್ಮಾಣಕ್ಕಾಗಿ ಬುಧವಾರ ಕಾವೂರು ವಿನಾಯಕ ಕಾರಂತರ ನೇತೃತ್ವದಲ್ಲಿ ಶಿಲಾನ್ಯಾಸ ಜರುಗಿತು.
ಈ ಸಂದರ್ಭದಲ್ಲಿ ಮಾಣಿಬೆಟ್ಟುಗುತ್ತಿನ ವಿನಯಕುಮಾರ್ ಶೆಟ್ಟಿ, ರವಿ ಶೆಟ್ಟಿ, ಪ್ರಮೋದ್ ಕುಮಾರ್ ರೈ, ಭಾಗ್ಯರಾಜ ಆಳ್ವ, ಕಿಟ್ಟಣ್ಣ ರೈ, ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಸುಧಾಕರ ಶೆಟ್ಟಿ, ಸದಾಶಿವ ಶೆಟ್ಟಿ ಕೆ, ಪುರಂದರ ಮಲ್ಲಿ, ಚಂದ್ರಶೇಖರ ಶೆಟ್ಟಿ, ಸತೀಶ್ ಶೆಟ್ಟಿ, ನಳಿನಿ ಶೆಟ್ಟಿ, ಸೇಸಮ್ಮ, ಶ್ರೀಧರ ಪೂಜಾರಿ, ಲಕ್ಷ್ಮಣ್ ಸಾಲ್ಯಾನ್ ಅಳಪೆ, ವಾಸು ಚೊಕ್ಕಬೆಟ್ಟು, ವಿಠಲ ಸಾಲ್ಯಾನ್ ಕುಂಡೇಲ, ವಿಶ್ವನಾಥ ಪರಾರಿ, ಶೇಖರ ಪರಾರಿ, ಲೋಕೇಶ್ ಬೆಂಜನಪದವು, ಶ್ರೀನಿವಾಸ ಸಾಲ್ಯಾನ್ ಮೊದಲಾದವರಿದ್ದರು.

