ಮೂಡುಬಿದಿರೆ: ತುಳುನಾಡಿನ ಪರಂಪರೆ ಆಚಾರ-ವಿಚಾರ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು. ತುಳು ಸಂಸ್ಕøತಿಯನ್ನು ತಮ್ಮೊಳಗೆ ಅಳವಡಿಸಿಕೊಂಡು ಅದನ್ನು ಪ್ರಸ್ತುತ ಪಡಿಸುವಲ್ಲಿ ಯುವ ಪ್ರತಿಭೆಗಳು ಮುಂದಾಗಬೇಕು. ಯಾವುದೇ ಪ್ರತಿಭಾ ಅನಾವರಣಗೊಳಿಸಲು ವಯಸ್ಸಿನ ಮಿತಿ ಇಲ್ಲ ಅದಕ್ಕೆ ಮನಸ್ಸು ಮುಖ್ಯ. ಸಾಧನೆಯ ಛಲವಿದ್ದರೆ ಪ್ರತಿಭೆ ಬೆಳಗುತ್ತದೆ ಎಂದು ಕರಿಂಜೆ ಶ್ರೀ ಶಕ್ತಿ ಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

madilu sanman puraskar

ಮಡಿಲು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ `ಮಡಿಲು ಸಮ್ಮಾನ್ ಪುರಸ್ಕಾರ್ 2018 ‘ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಾಧಕರಿಗೆ ಬಿರುದು, ಸನ್ಮಾನ, ಗೌರವ:
ಮಡಿಲು ಸಮ್ಮಾನ್ ಪುರಸ್ಕಾರ್ ಅಗ್ರಗಣ್ಯ ಸಾಧಕರಿಗೆ ಮಡಿಲು ಬಿರುದು ಪ್ರದಾನ ಮಾಡಲಾಯಿತು ಡಾ. ಕಾಂತಿ ಹರೀಶ್ (ವಾತ್ಸಲ್ಯ ರೂಪಿ), ಶ್ರವಣ್ ಕುಮಾರ್ (ಸ್ವಚ್ಛತಾ ರಾಯಭಾರಿ), ಜೋಸೆಫ್ ಕ್ರಾಸ್ತಾ(ಕರುಣಾಮಯಿ), ಎಂ.ದಿನೇಶ್( ವೀರ ಸಿಂಧೂರ), ಜಯ ಶೆಟ್ಟಿ ಬೆಳುವಾಯಿ(ವೀರ ಭಾರತ ಪುತ್ರ) ಅವರಿಗೆ ಬಿರು ನೀಡಿ ಗೌರವಿಸಲಾಯಿತು. ಮಯಾಂಕ್ ಜೈನ್, ಪ್ರತೀಕ್ಷಾ ಮಂಗಳೂರು, ವೃಂದ ಕೂನ್ನಾರ್, ಎಂ.ಜೆ ಅನೀಶ್ ಮೂಡುಬಿದಿರೆ, ಅರ್ಪಿತ್, ರಕ್ಷತಾ ಬೋಳಾರ್, ಕೃತಿ ಆರ್ ಸನಿಲ್, ಕೃತಿ ಉಚ್ಚಿಲ, ವಸಂತ್, ಮಂಜಿತ್, ತೀರ್ಥ ಪೊಳಲಿ, ತನೀಶ್ ಮಂಗಳೂರು, ಸಾಕ್ಷಿ ಗುರುಪುರ, ಪಂಚಮಿ ಮಾರೂರು, ಕೌಶಿಕ್, ರಾಜೇಶ್ ಭಟ್, ಅಪೇಕ್ಷಾ ಮಂಗಳೂರು, ಮಾನ್ವಿ ಎಂ.ಜೈನ್, ಧರ್ಮೇಂದ್ರ ಮುರಾರಿ, ನಿಶ್ಮಿತಾ ಕಾಸರಗೋಡು, ವಿ.ಜೆ ಪೂರ್ವಿ ಕೆ.ರಾವ್, ಅದ್ವಿಕಾ ಶೆಟ್ಟಿ. ಸನ್ನಿಧಿ ಟಿ.ರೈ ಅವರನ್ನು ಸನ್ಮಾನಿಸಲಾಯಿತು. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಜವನೆರ್ ಬೆದ್ರ, ಬಿರುವೆರ್ ಕುಡ್ಲ ಬೆದ್ರ ಘಟಕ, ಭಗತ್ ಸೇನೆ ಮೂಡುಬಿದಿರೆ ಹಾಗೂ ಅಮೃತ ಸಂಜೀವಿನಿ ಸಂಘಟನೆಗಳನ್ನು ಗೌರವಿಸಲಾಯಿತು.
ವಕೀಲ ನವನೀತ್ ಹಿಂಗಾಣಿ, ಚಿತ್ರ ನಟರಾದ ಪ್ರಥ್ವಿ ಅಂಬರ್, ಸೂರಜ್ ಸನಿಲ್,ಕು. ಸುವರ್ಣ ಶೆಟ್ಟಿ, ತುಳು ಚಿತ್ರ ನಿರ್ಮಾಪಕ ಸಂದೇಶ್ ರಾಜ್, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಜೈಸನ್ ತಾಕೊಡೆ, ಬಿರುವೆರ್ ಕುಡ್ಲ ಬೆದ್ರ ಘಟಕದ ಅಧ್ಯಕ್ಷ ಪ್ರಶಾಂತ್ ಬಿರ್ವ, ಮಡಿಲು ತಂಡ ಅಧ್ಯಕ್ಷೆ ಪ್ರತಿಮಾ, ಕಾರ್ಯದರ್ಶಿ ರಂಜಿತ್ ಬೆಳಿಂಜ, ತಂಡದ ಸ್ಥಾಪಕ ಶೇಖರ್ ಬೆಳಾಲ್ ಹಾಗೂ ಮಡಿಲು ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಜ್ಞಾ ಸ್ವಾಗತಿಸಿದರು. ವಿ.ಜೆ ಪ್ರತೀಶ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *