ಮೂಡುಬಿದಿರೆ: ಸಾರ್ವಜನಿಕ ಆರಾಧನೆ ಹಾಗೂ ಆಚರಣೆಯಿಂದಾಗಿ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದಮಯ ಬದುಕನ್ನು ರೂಪಿಸಬಹುದೆಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಇಲ್ಲಿನ ನಾಗರಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ನಡೆದ 48ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಚತುರ್ಥ ಉದ್ಯಾಪನಾ ಮಹೋತ್ಸವದಂಗವಾಗಿ ಸಂಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

Nagarakatte sathyanarayana pooje
ಮುಖ್ಯ ಅತಿಥಿಯಾಗಿ ಚೌಟರ ಅರಮನೆ ಕುಲದೀಪ ಎಂ., ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಕೆ.ಅಮರನಾಥ ಶೆಟ್ಟಿ, ಉದ್ಯಮಿ ಕೆ. ಶ್ರೀಪತಿ ಭಟ್, ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ , ಪುರಸಭಾ ಸದಸ್ಯ ಪಿ.ಕೆ. ಥಾಮಸ್ ಭಾಗವಹಿಸಿದ್ದರು.
ಸಮಿತಿಯ ಹಿರಿಯ ಸದಸ್ಯರ ಪೈಕಿ ಮಹಾಬಲ ಸಾಲ್ಯಾನ್, ಏಜೇಂದ್ರ ಅಂಚನ್, ಮೋಹನ ಕೋಟ್ಯಾನ್, ಗೋಪಾಲ ದೇವಾಡಿಗ, ಆನಂದ ಕೊಟ್ಟಾರಿ, ಲಿಂಗಪ್ಪ ಕೊಟ್ಟಾರಿ, ಬೊಕ್ಕಸ ಜಗನ್ನಾಥ ರಾವ್, ಮೀರಾ ಮಲ್ಯ, ಭಾನುಮತಿ ಶೀನಪ್ಪ, ಗಿರಿಜಾ ಸಿದ್ದಣ್ಣ, ಶ್ಯಾಮ ಆಂಚನ್, ಗಿರಿಜಾ ಮಜಲು ಮನೆ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸದಸ್ಯರಾದ ಕೃಷ್ಣಪ್ಪ ದೇವಾಡಿಗ, ಭೋಜ ಶೆಟ್ಟಿ, ಅಚ್ಯುತ ಮೇಸ್ತ್ರಿ, ಸೋಮನಾಥ ಅಂಚನ್, ಯಶೋಧರ ದೇವಾಡಿಗ, ಸುಂದರ ಸನಿಲ್, ವಿಶೇಷವಾಗಿ ದಿ.ಶೀನಪ್ಪ ಮೊದಲಾದವರ ಸೇವೆಯನ್ನೂ ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸಲಾಯಿತು.
ಪೂಜಾ ವಿಧಿಗಳನ್ನು ನೆರವೇರಿಸಿದ ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಪಾಕಶಾಸ್ತ್ರಜ್ಞ ಗೋಪಾಲ ಭಟ್ ಹಾಗೂ ಸಮಿತಿ ಅಧ್ಯಕ್ಷ , ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹರ್ಷಿತಾ ಪ್ರಕಾಶ್ ಬಹುಮಾನಿತರ ವಿವರ ನೀಡಿದರು.
ಕಾರ್ಯಕ್ರಮವನ್ನು ಕೋಶಾಧಿಕಾರಿ ರಾಜಾರಾಮ್ ಸ್ವಾಗತಿಸಿದರು. ರಮಾ ಪದ್ಮನಾಭ ನಿರೂಪಿಸಿದರು. ಸಂಚಾಲಕ ಲಕ್ಷ್ಮಣ ಪೂಜಾರಿ ವಂದಿಸಿದರು.

By suddi9

Leave a Reply

Your email address will not be published. Required fields are marked *