ದೆಹಲಿ: ಗಾಯದ ಸಮಸ್ಯೆ ಯಿಂದ ಬಳಲುತ್ತಿರುವ ದೇಶದ ಖ್ಯಾತ ಡಬಲ್ಸ್ ಬ್ಯಾಡ್ಮಿಂಟನ್ ಆಟ ಗಾರ್ತಿ ಜ್ವಾಲಾ ಗುಟ್ಟಾ ಮುಂಬರುವ ಪ್ರತಿಷ್ಟಿತ ಏಶ್ಯನ್ ಗೇಮ್ಸ್‍ನಿಂದ ಹೊರಬಿದ್ದಿದ್ದು, ಅಭಿಮಾನಿಗಳಿಗೆ ಆಘಾತ ಮೂಡಿಸಿದೆ.

ಬಲ ಮೊಣಕಾಲಿನ ಗಾಯದ ಸಮಸ್ಯೆ ಯಿಂದ ಬಳಲುತ್ತಿರುವ ಜ್ಚಾಲಾ ಏಶ್ಯನ್ ಗೇಮ್ಸ್ ನಿಂದ ಹೊರಬಿದ್ದಿದ್ದು, ನಿಜವಾಗಿಯೂ ಭಾರತಕ್ಕೆ ದೊಡ್ಡ ಆಘಾತ ಎನ್ನಬಹುದು. ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಜೊತೆ ಜ್ವಾಲಾ ಕಣಕ್ಕಿಳಿಯುತ್ತಿದ್ದರು. ಅಲ್ಲದೆ ಇತ್ತೀಚಿಗೆ ಮುಕ್ತಾಯಗೊಂಡ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಜ್ವಾಲಾ-ಪೊನ್ನಪ್ಪ ಜೋಡಿ ಫೈನಲ್‍ನಲ್ಲಿ ಸೋಲುಂಡು ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಇನ್ನು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಜ್ವಾಲಾ, ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ವೈದ್ಯರು ಎರಡು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಗೇಮ್ಸ್‍ನಿಂದ ಹೊರಬೀಳುವಂತಾ ಗಿದೆ. ಅಲ್ಲದೆ ಈ ಬಗ್ಗೆ ಜ್ವಾಲಾ ಪ್ರತಿ ಕ್ರಿಯೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಮುಂಬರುವ ಏಶ್ಯನ್ ಗೇಮ್ಸ್‍ಗೆ ತರಬೇತಿ ಪಡೆಯುವ ವೇಳೆ ನೋವು ಕಾಣಿಸಿಕೊಂಡಿತ್ತು. ಆದರೆ ಇದು ಅಷ್ಟಾಗಿ ಗಂಭೀರ ವಿಚಾರವಾಗಿರಲಿಲ್ಲ. ಅಲ್ಲದೆ ಕೋಚ್ ಕೂಡ ಇದನ್ನು ಗಂಭೀರವಾಗಿ ನೋಡದಂತೆ ತಿಳಿಸಿ ದ್ದರು. ಆದರೆ ನಾನೀಗ ಮೊಣಕಾಲಿನ ಸೆಳೆತಕ್ಕೆ ಸಿಲುಕಿದ್ದೇನೆ. ಆದರೆ ವೈದ್ಯರು ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಕೂಡ ಸೂಚಿಸಿ ದ್ದಾರೆ. ಆದರೆ ಈಗ ಊತ ಕಡಿಮೆಯಾ ಗಿದ್ದು, ಆದರೆ ಮೊಣಕಾಲಿನ ಮೇಲೆ ಭಾರ ಹಾಕಲು ನನಗೆ ಸಾಧ್ಯವಾಗುತ್ತಿಲ್ಲ. ವಯಸ್ಸು ಕೂಡ ಈಗ ಪರಿಗಣಿಸ ಬೇಕಾದ ಅಂಶವಾಗಿದ್ದು, ಆಕ್ರಮಣ ಕಾರಿಯಾದ ಆಟ ಪ್ರದರ್ಶಿಸುವಂತಿಲ್ಲ ಎಂದು ಜ್ವಾಲಾ ತಿಳಿಸಿದರು.
