ಕೈಕಂಬ: ವಾಮಂಜೂರು ಮೂಡ್ಶೆಡ್ಡೆಯ ಶುಭೋದಯ ವಿದ್ಯಾಲಯದ ಕುಮಾರಿ ಅಂಕಿತಾ ಪ್ರಸನ್ನ ರಾವ್ ಕರ್ನಾಟಕ ಸರ್ಕಾರ ಸಂಸ್ಕøತಿ ಅಕಾಡಮಿ ನಡೆಸಿದ ರಾಜ್ಯಮಟ್ಟದ ಆಶು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಅವರನ್ನು ಶುಭೋದಯ ವಿದ್ಯಾಲಯದಲ್ಲಿ ನಡೆದ ಸಾಹಿತ್ಯ ಹಬ್ಬದ ಸಂದರ್ಭ ಅವರನ್ನು ಸನ್ಮಾನಿಸಲಾಯಿತು.
ಶಾರದ ವಿದ್ಯಾಸಂಘಗಳ ಅಧ್ಯಕ್ಷರಾದ ಪ್ರೋ. ಎಂ. ಬಿ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣರು ವಿದ್ಯಾರ್ಥಿಗಳ ಸೃಜನಾತ್ಮಕ ಬೆಳವಣಿಗೆಗೆ ಸಾಹಿತ್ಯ ಪೂಜೆ ಅನಿವಾರ್ಯ ಆ ಪಥದಲ್ಲಿ ಸಾಗಿದ ಕುಮಾರಿ ಅಂಕಿತಾಳಿಗೆ ಶುಭವನ್ನು ಹಾರೈಸಿದರು.
ಕುವೈಟ್ ಏರ್ವೆಸಿನ ಪ್ಲಾನಿಂಗ್ ಇಂಜಿನಿಯರ್ ಎಂ. ನರಸಿಂಗ ರೈ, ಸಿ.ಎ ಗಣೇಶ್ ರಾವ್, ರಾಜೇಂದ್ರ ಕಿನ್ನಿಕಂಬಳ, ಪ್ರಾಂಶುಪಾಲ್ ಜಯಶ್ರೀ ಪೈ ಉಪಸ್ಥಿತರಿದ್ದರು. ಕಿನ್ನಿಕಂಬಳ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿ. ಶಿಕ್ಷಕ ಕೋಮಲತಾ ಸ್ವಾಗತಿಸಿದರು. ಶಿಕ್ಷಕ ರಾಜರಾಮ ಶರ್ಮ ವಂದಿಸಿದರು.
