ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕೊಳತ್ತಮಜಲು ಪಂಚಗ್ರಾಮ ಬಿಲ್ಲವರ ಸಂಘದ ವತಿಯಿಂದ 160ನೇ ವರ್ಷದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ.ಪುರೋಹಿತರಾದ ಎಂ ಲೋಕೇಶ್ ಶಾಂತಿ ಅವರ ನೇತ್ಗೃತ್ವದಲ್ಲಿ ಎರಡು ದಿನಗಳ ಪೂಜಾ ವಿಧಿ ವಿಧಾನಗಳು ನೆರವೇರಿತು.

ಭಾನುವಾರ ಬೆಳಗ್ಗೆ 5ರಿಂದ 6ರವರೇಗೆ ಗಣಹೋಮ ಬೆಳಗ್ಗೆ 7ರಿಂದ ಏಕಾಹ ಭಜನಾ ಸಂಕೀರ್ತನೆ ನಡೆಯಿತು. ಕಲಶಾಭಿಷೇಕ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತಪಣೆ ನಡೆಯಿತು. ಪಂಚಗ್ರಾಮದ ಬಿಲ್ಲವ ಭಾಂಧವರು ಪೂಜಾ ವಿಧಿವಧಾನಗಳಲ್ಲಿ ಪಾಲ್ಗೋಂಡು ಪ್ರಸಾದ ಸ್ವೀಕರಿಸಿದರು. ಅರ್ಚಕ ಜನಾರ್ಧನ ,ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಪೂಜಾರಿ , ಗೌರವಧ್ಯಕ್ಷ ತಾಚಪ್ಪ ಪೂಜಾರಿ,ಉಪಾಧ್ಯಕ್ಷರಾದ ವಿಶ್ವನಾಥ ಪಂಡಿತ್ ಗಂಗಾಧರಪೂಜಾರಿ,ಕಮಾಲಾಕ್ಷ ಪೂಜಾರಿ,ರಾಜುಕೋಟ್ಯಾನ್ , ಕಾರ್ಯದಶರ್ಿ ಟಿ.ಆರ್ ನಾಗೇಶ್, ಸಂಘಟನಾ ಕಾರ್ಯದಶರ್ಿ ಯೋಗಿಶ್ ಸೂರ್ಲ,ಕೋಶಾದಿಕಾರಿ ಯಶವಂತ ಪೊಳಲಿ, ಮಹಳಾವಿಭಾಗದ ಬಿ.ಕೇ.ಸರೋಜಿನಿ, ರೇವತಿರತ್ನಾಕರ್, ಕಸ್ತೂರಿ ಸುಧಾಕರ, ಕೂರಿಯಾಳ ಗ್ರಾಮ ಸಮಿತಿ ಅಧ್ಯಕ್ಷ ರಾಘವಪೂಜಾರಿ,ಬಡಗಬೆಳ್ಳೂರು ಗ್ರಾಮಸಮಿತಿ ಅಧ್ಯಕ್ಷ ಉಮೇಶ್ ಪೂಜಾರಿ, ಕರಿಯಂಗಳ ಗ್ರಾಮ ಸಮಿತಿ ಅಧ್ಯಕ್ಷ ಶಂಕರ ಪೂಜಾರಿ,ತೆಂಕಬೆಳ್ಳೂರುಗ್ರಾಮಸಮಿತಿ ಅಧ್ಯಕ್ಷ ಗಂಗಾಧರ ಕಮ್ಮಾಜೆ ಅಮ್ಮುಂಜೆ ಗ್ರಾಮಸಮಿತಿ ಅಧ್ಯಕ್ಷ ಉಮೇಶ್ ಪೂಜಾರಿ ಮತ್ತು ಸರ್ವಸದಸ್ಯರು ಭಾಗವಹಿಸಿದ್ದರು.



