ಸುದ್ದಿ9ಬಂಟ್ವಾಳ:ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರತಿಯೊಬ್ಬರಿಗೂ ಮನೆ ನಿವೇಶನ ಒದಗಿಸುವುದಕ್ಕಾಗಿ ಈಗಾಗಲೇ ಒಟ್ಟು 75ಎಕ್ರೆ ಜಮೀನು ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟ ವತಿಯಿಂದ ಬಿ.ಸಿ.ರೋಡ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಕರ್ಾರವು ಈಗಾಗಲೇ ಸಕರ್ಾರಿ ಜಮೀನಿನಲ್ಲಿ ವಾಸಿಸುತ್ತಿರುವ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಮಹತ್ಕಾರ್ಯದಲ್ಲಿ ತೊಡಗಿದ್ದು, ಮನೆ ನಿವೇಶನ ದುರುಪಯೋಗವಾಗದಂತೆ ತಡೆಯುವ ಜವಾಬ್ದಾರಿ ಪ್ರತೀ ಪಂಚಾಯಿತಿಗೆ ಇದೆ ಎಂದರು.
ಈ ನಡುವೆ ಕೆಲವೊಂದು ಗ್ರಾಮ ಪಂಚಾಯಿತಿನಲ್ಲಿ ನಿವೇಶನಕ್ಕಾಗಿ ಮೀಸಲಿಟ್ಟ ಜಮೀನು ಮತ್ತು ಸ್ಮಶಾನ ಭೂಮಿ ಬಗ್ಗೆ ಗಡಿಗುರುತು ಮಾಡಿ ಹಸ್ತಾಂತರಿಸುವ ಕೆಲಸದಲ್ಲಿ ಭೂಮಾಪನಾ ಶಾಖೆ ಅಧಿಕಾರಿಗಳು ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸದಸ್ಯರು ದೂರಿದರು.
ಇನ್ನೊಂದೆಡೆ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕರ್ಾರಿ ಜಮೀನು ಒತ್ತುವರಿಯಾಗಿದ್ದರೂ ಕಂದಾಯ ಇಲಾಖೆ ಮೌನವಹಿಸಿದೆ ಎಂಬ ಆರೋಪ ಕೇಳಿ ಬಂತು. ಪಡಿತರಚೀಟಿ ವಿತರಣೆಗೆ ಪಡೆಯುವ ರೂ 50 ಮೊತ್ತವನ್ನು ಆಯಾಯ ಪಂಚಾಯಿತಿಗೆ ನೀಡಬೇಕು ಎಂಬ ಸಲಹೆ ವ್ಯಕ್ತವಾಯಿತು.
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ಲೈನ್ಮೆನ್ ಕೊರತೆ, ಕೆಂಪುಕಲ್ಲು, ಕಪ್ಪು ಕಲ್ಲು ಕ್ವಾರೆ ಮತ್ತು ಮರಳುಗಾರಿಗೆ ಬಗ್ಗೆ ಪಂಚಾಯಿತಿ ಕರ ವಸೂಲಿ ಅವಕಾಶ ಸಿಗಬೇಕು ಎಂಬ ಆಗ್ರಹ ವ್ಯಕ್ತವಾಯಿತು.
ತಾ.ಪಂ.ಅಧ್ಯಕ್ಷ ಯಶವಂತ ಡಿ. ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ, ಸದಸ್ಯ ಬಿ.ಪದ್ಮಶೇಕರ ಜೈನ್, ಮಹಮ್ಮದ್ ಶರೀಫ್, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ಒಕ್ಕೂಟ ಜಿಲ್ಲಾಧ್ಯಕ್ಷ ದೇವದಾಸ ಭಂಡಾರಿ, ತಾಲ್ಲೂಕು ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದಶರ್ಿ ಪ್ರಭಾಕರ ಪ್ರಭು, ಮಂಜು ವಿಟ್ಲ ಮತ್ತಿತರರು ಇದ್ದರು.

