ಮೂಡುಬಿದಿರೆ: ಪ್ರಥಮ ವರ್ಷದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಆಳ್ವಾಸ್ ನುಡಿಸಿರಿಯ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾಗಿರಿಯಲ್ಲಿ `ಸ್ಪರ್ಶ’ ಮತ್ತು `ಸತ್ವ’ ಶಿಬಿರಗಳನ್ನು ಆಯೋಜಿಸಲಾಗಿತ್ತು.

ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿನ ನೇತೃತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಂಡಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಪುಣೆ ಮತ್ತು ಆಯುಷ್ ಮಂತ್ರಾಲಯದ ಸಹಯೋಗದೊಂದಿಗೆ ಇದು ನಡೆಯಿತು.
ಅಕ್ಯುಪ್ರೆಶರ್, ಅಂಗಾಲು ಮಾಲೀಶು, ತಲೆಮಾಲೀಶು, ಸೌಂದರ್ಯ ವರ್ಧಕ ಪ್ಯಾಕ್ಗಳ ಮೂಲಕ ಸ್ಪರ್ಶದ ಪ್ರಯೋಜನವನ್ನು ಜನರು ಪಡೆದುಕೊಂಡರು.

