ತೀರ್ಥಹಳ್ಳಿ: ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿಯಾಗಿರುವ ನಾಗರಾಜ್ ಅವರು ಮಾಧ್ಯಮಗಳ ಮುಂದೆಯೇ ದೈವ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ..ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ಈಗಾಗಲೇ ನಾಗಬಿಂಬ ಹೊರತೆಗೆಯುವ ಕಾರ್ಯವನ್ನು ಮಾಧ್ಯಮಗಳ ಮುಂದೆಯೇ ಆರಂಭಿಸಿದ್ದಾರೆ.

ಪಾತ್ರಿಗಳು ಮೊದಲೇ ಹೇಳಿದಂತೆ ಸ್ಥಳದಲ್ಲಿ ತ್ರಿಶೂಲ ಮತ್ತು ನಾಗರ ಕಲ್ಲು ಸಿಕ್ಕಿದ್ದು ಜನರಲ್ಲಿ ಇನ್ನಷ್ಟು ಆಶ್ಚರ್ಯ ಉಂಟು ಮಾಡಿದೆ.ಈ ಹಿಂದೆ ಮರಗಳಲೆಯ ಸಣ್ಣ ಉದ್ಯಮಿ ನಾಗಪ್ಪ ಪೂಜಾರಿಯವರು ತಮ್ಮ ಕುಟುಂಬದ ಸಮಸ್ಯೆ ಹಾಗು ವ್ಯಾಪಾರದ ನಷ್ಟದ ಬಗ್ಗೆ ಪಾತ್ರಿಗಳಿಗೆ ತಿಳಿಸಿದ್ದರು ಮನೆಯ ಹಿಂಭಾಗದಲ್ಲಿ ನಾಗ ದೋಷ ಇರುವುದಾಗಿ ತಿಳಿಸಿದ್ದರು.ಇಂದು ಆ ನಾಗಬಿಂಬ ಹೊರತೆಗೆಯುವ ಕಾರ್ಯ ಆರಂಭವಾಗಿದೆ.

By suddi9

Leave a Reply

Your email address will not be published. Required fields are marked *