ಸುದ್ದಿ9ಬಂಟ್ವಾಳ: ಕಾವಳ ಮೂಡೂರು ಗ್ರಾಮದ ಎನ್.ಸಿ.ರೋಡ್ನ ಸರ್ದಾರ್ ಪಾಷಾ ಅವರ ಹೃದಯ ಖಾಯಿಲೆಯ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ರೂ. 35 ಸಾವಿರದ ಚೆಕ್ಕನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೀಡಿದರು. ಈ ಸಂದರ್ಭ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಸದಸ್ಯ ಪದ್ಮಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಫ್ಲೋಸಿ ಡಿ’ಸೋಜಾ ಉಪಸ್ಥಿತರಿದ್ದರು.

