ಕಿನ್ನಿಗೋಳಿ; ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಶಿಬರೂರು ದೇಲಂತ ಬೆಟ್ಟು ನಿವಾಸಿ ದಿ. ಜಾರಪ್ಪ ಪೂಜಾರಿಯವರ ಪತ್ನಿ ಲಕ್ಷೀ (೭೫) ರವರು ಅನಾರೋಗ್ಯದಿಂದಿದ್ದು ಕಳೆದ ಅಗಷ್ಟ್ ೨೧ ರಂದು ಮನೆಯಿಂದ ಹೊರಟು ಹೊದವರು ವಾಪಾಸ್ ಮನೆಗೆ ಬಾರದೆ ನಾಪತ್ತೆ ಯಾಗಿದ್ದಾರೆ.
ಇವರು ಸುಮಾರು ೫.೬ ಅಡಿ ಎತ್ತರ ಉರುಟು ಮುಖ್, ದಪ್ಪ ಶರೀರ, ಹೊಂದಿದ್ದು ತುಳು ಬಾಷೆ ಬಲ್ಲವರಾಗಿದ್ದಾರೆ. ಮನೆ ಬಿಡುವಾಗ ಹಸಿರು ಸೀರೆ, ಬಿಳಿ ರವಕೆ ದರಿಸಿರುತ್ತಾರೆ, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಸುರತ್ಕಲ್ ಠಾಣೆಗೆ ಮಾಹಿತಿ ನೀಡಬೇಕೆಂದು ಸುರತ್ಕಲ್ ಪೋಲಿಸರು ತಿಳಿಸಿದ್ದಾರೆ.

