ಕಾರ್ಕಳ: ಇಲ್ಲಿನ ಕಾಂತಾವರ ಶಾರದಾ ನಗರದ ಪ್ರಕೃತಿ ನ್ಯಾಷನಲ್ ಶಾಲೆಯ ಎಂಟನೆಯ ತರಗತಿಯ ಪ್ರತಿಭಾನ್ವಿತ ಅಂತಾರಾಷ್ಟ್ರೀಯ ಕರಾಟೆಪಟು ಪ್ರಖ್ಯಾತ್ ಪೂಜಾರಿ ತನ್ನ ಹಲವಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳ ಸಾಲಿಗೆ ಮತ್ತೊಂದು ರಾಷ್ಟ್ರೀಯ ಹಾಗೂ ಎರಡು ರಾಜ್ಯ ಪ್ರಶಸ್ತಿಗಳನ್ನು ಸೇರಿದಂತೆ ಇತ್ತೀಚೆಗೆ ಒಟ್ಟು ಮೂರು ಚಾಂಪಿಯನ್‍ಶಿಪ್‍ಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ.

Karate champion (3)

ಕಳೆದ ಆಗಸ್ಟ್ 18ರಂದು ಬೆಂಗಳೂರಿನಲ್ಲಿ ನಡೆದ ಅಖಿಲಭಾರತ ಹಾಕುವಾಕಾಯ್ ಮುಕ್ತ ಕರಾಟೆ ಚಾಂಪಿಯನ್‍ಶಿಪ್‍ನ ಕುಮಿಟೆ 12-13 ವರ್ಷ ವಿಭಾಗದಲ್ಲಿ ದ್ವಿತೀಯ ಹಾಗೂ ಕಟಾದಲ್ಲಿ ತೃತೀಯ ಸ್ಥಾನ ಗಳಿಸಿದ್ದಾನೆ.

Karate champion (2)

ಕೆನ್-ಇ-ಮಬುನಿ- ಶಿಟೊ-ರಿಯು ಕರಾಟೆ ಶಾಲೆ ಆಯೋಜಿಸಿದ್ದ, ಸೆಪ್ಟೆಂಬರ್ 5ರಂದು ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಕುಮಿಟೆಯಲ್ಲಿ ಹಾಗೂ ಕಟಾದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಹಾಗೆಯೇ ಸೆಪ್ಟೆಂಬರ್ 8ರಂದು ಮಂಗಳೂರಿನಲ್ಲಿ ನಡೆದಿದ್ದ 16ನೇಯ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಸಹ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ.

Karate champion (1)

ಪ್ರಕೃತಿ ವಿದ್ಯಾಸಂಸ್ಥೆಯ ಪ್ರೋತ್ಸಾಹದಿಂದ ಈತ ತನ್ನ ನಾಲ್ಕನೆಯ ತರಗತಿಯಿಂದಲೇ ವಿವಿಧ ಸ್ತರಗಳಲ್ಲಿ ಅಸಂಖ್ಯಾತ ಕರಾಟೆ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ.

By suddi9

Leave a Reply

Your email address will not be published. Required fields are marked *