ಬಂಟ್ವಾಳ : ಪಾಣೆ ಮಂಗಳೂರು ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಯುವ ನಾಯಕ , ಸಾಮಾಜಿಕ ಮುಂದಾಳು ಸುದೀಪ್ ಕುಮಾರ್ ಶೆಟ್ಟಿ ಮಾಣಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ದ.ಕ.ಜಿಲ್ಲಾ ಕಾಂಗ್ರೆಸ್ ಆದ್ಯಕ್ಷ ಕೆ.ಹರೀಶ್ ಕುಮಾರ್ ಶಿಫಾರಸಿನಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡುರಾವ್ ಈ ಆಯ್ಕೆ ಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಾಣಿ ಗ್ರಾ.ಪಂ.ನಲ್ಲಿ 2ಬಾರಿ ಸದಸ್ಯರಾಗಿ ಆಯ್ಕೆಗೊಂಡು ನಿರಂತರ ಜನಸೇವೆಯಲ್ಲಿ ನಿರತರಾಗಿರುವ ಸುದೀಪ್ ಕುಮಾರ್ ಶೆಟ್ಟಿ ಕ್ರಿಯಾಶೀಲ ನಾಯಕರಾಗಿ , ಸಮರ್ಥ ಸಂಘಟಕರಾಗಿ ಚಿರಪರಿಚಿತರಾದವರು. ಬಿ.ಎ.ಪದವೀಧರರಾಗಿರುವ ಇವರು ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕರಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡವರು.
ಇವರು ಪ್ರಸ್ತುತ ಮಾಣಿ ಯುವಕ ಮಂಡಲದ ಅಧ್ಯಕ್ಷರಾಗಿ , ಶ್ರೀ ಉಳ್ಳಾಲ್ತಿ ಸೇವಾ ಸಮಿತಿ , ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಶಿಯೇಶನ್ ಸಹಿತ ಹಲವಾರು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು ಜನೋಪಯೋಗಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದಾರೆ.
