ಬಜ್ಪೆ : ಗುರುಪುರ ಕೈಕಂಬದಲ್ಲಿ ನಡೆದ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯ ವಿರುದ್ಧ ನಡೆಸ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡುತ್ತಿರುವ ಯು.ಬಿ.ಲೋಕಯ್ಯ
ಮಧ್ಯರಾತ್ರಿ ಬೆಲೆ ಏರಿಕೆಯ ಔಚಿತ್ಯವೇನು?: ಸಿಪಿಐಎಂ ಪ್ರಶ್ನೆ
ಬಜ್ಪೆ: ಬಡವರ ಪರ ಎನ್ನುವ ಯುಪಿಎ ಕಾಂಗ್ರಸೆ ಸರಕಾರ ತೈಲಬೆಲೆಯನ್ನು ಮಧ್ಯರಾತ್ರಿಯಲ್ಲೇ ಏರಿಸುತ್ತಾರೆ. ಹಗಲು ಹೊತ್ತಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರ ಕಚ್ಚಾಟ ನಡೆಸಿ ರಾತ್ರಿಯಾಗುತ್ತಿದ್ದಂತೆ ಒಂದಾಗುತ್ತಾರೆ. ಮಧ್ಯರಾತ್ರಿ ಎಲ್ಲರೂ ನಿದ್ದೆಯಲ್ಲಿ ಜಾರಿದ್ದಾಗ ತೈಲಬೆಲೆ ಏರಿಸುತ್ತಾರೆ. ಇದರ ಔಚಿತ್ಯವಾದರೂ ಏನು ಎಂದು ಸಿಪಿಐ(ಎಂ) ಪಕ್ಷದ ಗುರುಪುರ ವಲಯ ಮುಖಂಡ ಯು.ಬಿ ಲೋಕಯ್ಯ ಪ್ರಶ್ನಿಸಿದರು.
ಅವರು ಗುರುಪುರ ಕೈಕಂಬದಲ್ಲಿ ನಡೆದ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯ ವಿರುದ್ಧ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡುತ್ತಾರೆ.
ಒಂದರ್ಥದಲ್ಲಿ ಪ್ರತಿಪಕ್ಷ ಬಿಜೆಪಿ ಹಾಗೂ ಕಾಂಗ್ರಸ್ ಒಂದೇ ನಾಣ್ಯದ ಎರಡು ಮುಖಗಳು. ತೈಲ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಕಾಟಾಚ್ಚಾರಕ್ಕೆಂದು ಹೋರಾಟ ನಡೆಸುತ್ತದೆ. ಈ ಎರಡೂ ಪಕ್ಷಗಳಿಗೆ ಬಡವರ ಹಿತ ಮುಖ್ಯವಲ್ಲ. ತೈಲ ಬೆಲೆ ಏರಿಕೆಯಿಂದ ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನರಿಗೆ ಮಂಕುಬೂದಿ ಎರಚಲು ಮಧ್ಯರಾತ್ರಿ ಬೆಲೆ ಏರಿಕೆ ನಡೆಸುತ್ತಾರೆ. ಯಾಕೆಂದರೆ ರಾತ್ರಿ ಹೊತ್ತು ಬಡ ರಿಕ್ಷಾ ಚಾಲಕರಂಥಾ ವಾಹನಚಾಲಕರು ಮಲಗಿರುತ್ತಾರೆ ಆದ್ದರಿಂದ ಯಾರೂ ಸಹ ಪ್ರತಿಭಟನೆ ಸಡೆಸಲಾರರು ಎಂಬ ಧೈರ್ಯ ಅವರಲ್ಲಿದೆ ಎಂದು ದೂರಿದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ 12 ಸಿಲಿಂಡರ್ ಒದಗಿಸುತ್ತದೆ. ಲಾಂಗ್ರಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದ್ದರಿಂದ 9 ಮಿತಿಯಲ್ಕಿದ್ದ ಗ್ಯಾ ಸಿಲಿಂಡರನ್ನು 12ಕ್ಕೆ ಏರಿಸಲಾಗಿದೆ. ಇಂಥಾ ಸರಕಾರಕ್ಕೆ ಮುಂದೆ ಜನ ಪಾಠ ಕಲಿಸಲಿದ್ದು ಅಧಿಕಾರದಿಂದ ಕಿತ್ತೆಸೆಯಲಿದ್ದಾರೆ ಎಂದು ಲೋಕಯ್ಯ ನುಡಿದರು.
ವೇದಿಕೆಯಲ್ಲಿ ಗುರುಪುರ ವಲಯ ಸಿಪಿಐ(ಎಂ) ಮುಖಂಡರಾದ ಮಾಧವ, ಹಾಗೂ ಎಂ ಹೊನ್ನಯ್ಯ ಮೂಲ್ಯ ಉಪಸ್ಥಿತರಿದ್ದರು10 bajpe 2

By suddi9

Leave a Reply

Your email address will not be published. Required fields are marked *