ಈ ಕ್ಷೇತ್ರದ ಜನರು ಹಾಲಿನಂತಹಾ ಮನಸ್ಸು ಉಳ್ಳವರು [ಈ ಊರುದ ಜನಕ್ಕುಲು ಪೇರ್ದಂಚಿನ ಮನಸ್ಸ್ದಕುಲು ] ಎಂಬ ಪ್ರತೀತಿ ಇತ್ತು. ಅದಕ್ಕಾಗಿ ಈ ಕ್ಷೇತ್ರಕ್ಕೆ `ಪೆರಾರ’ ಎಂಬ ಹೆಸರು ಬಂದಿತು. ನಿಜವಾಗಿಯೂ ಈ ಮಾತನ್ನು ಪೆರಾರದ ಜನರು ಸಾಧಿಸಿ ತೋರಿಸಿದ್ದಾರೆ ಎಂದು ಅವರು ನುಡಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿಯ ಸಿ.ಇ.ಓ ಎಂ.ವಿ ವೆಂಕಟೇಶ್, ಐ.ಎ.ಎಸ್ ವಹಿಸಿದ್ದರು. ಕನರ್ಾಟಕ ಬ್ಯಾಂಕ್ ಆಡಳಿತ ನಿದರ್ೇಶಕ ಪಿ. ಜಯರಾಮ್ ಭಟ್, ಧಾಮರ್ಿಕ ಪ್ರಸ್ಥಾವನೆ ಗೈದರು. ಅರಣ್ಯ, ಪರಿಸರ, ದ.ಕ ಜಿಲ್ಲಾ ಉಸ್ತುವರಿ ಸಚಿವ ರಮಾನಾಥ ರೈ, ಕನರ್ಾಟಕ ರಾಜ್ಯ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್, ಮುಂಬೈ ಉದ್ಯಮಿ ಬಾಬು ಎಸ್ ಶೆಟ್ಟಿ ಮತ್ತು ಜೀಣೋಧ್ದಾರ ಸಮಿತಿ ಅಧ್ಯಕ್ಷ ಸುಧಿರ್ ಪ್ರಸಾದ್ ಶೆಟ್ಟಿ, ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಉಪಸ್ಥಿತರಿದ್ದರು. ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿ, ದಯಾನಂದ ಕತ್ತಲ್ ಸಾರ್ ನಿರೂಪಿಸಿ. ಸುರೇಶ್ ಅಂಚನ್ ಧನ್ಯವಾದವಿತ್ತರು.


