ಮೂಡುಬಿದಿರೆ: ಹಲವು ಚಿಂತನೆಯನ್ನು ಕಾರ್ಯಕ್ರಮವಾಗಿ ರೂಪಿಸಿ ಯುವಜನರಲ್ಲಿ ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸವನ್ನು ಮೂಡುಬಿದಿರೆಯ ಜೆಸಿಐ ಮಾಡುತ್ತಿದೆ. ಯುವ ಜನತೆಯ ಪ್ರತಿಭೆಗಳನ್ನು ಸೂಕ್ತ ವೇದಿಕೆ ಕಲ್ಪಿಸುತ್ತಿರುವುದು ಜೆಸಿಐ ಹೆಗ್ಗಳಿಕೆ ಎಂದು ಶ್ರೀಮಹಾವೀರ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಹೇಳಿದರು.
ಜೆಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ನಡೆಯಲಿರುವ `ಸಾತ್ ಸುರ್’ ಜೇಸಿ ಸಪ್ತಾಹಕ್ಕೆ ಸಮಾಜಮಂದಿರದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜೆಸಿಐ ವಲಯ 15ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಜೆಸಿಐ ವಲಯ 15ರ ವ್ಯಾಪ್ತಿಯಲ್ಲಿ ಮೂಡುಬಿದಿರೆ ಜೆಸಿಐಯು ಉತ್ತಮ ಅರ್ಥಪೂರ್ಣ ಕೆಲಸಗಳಿಂದ ಗುರುತಿಸಿಕೊಂಡಿದೆ. ವೈಶಿಷ್ಯಪೂರ್ಣ ಕಾರ್ಯಕ್ರಮ, ಯೋಜನೆಗಳಿಂದಾಗಿ ಇಲ್ಲಿನ ಜೆಸಿಐ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಸಿಐ ಮೂಡುಬಿದಿರೆ ಅಧ್ಯಕ್ಷೆ ಸಂಗೀತಾ ಪ್ರಭು, ಕಾರ್ಯದರ್ಶಿ ರಾಮಕೃಷ್ಣ, ಜೆಜೆಸಿ ಅಧ್ಯಕ್ಷ ಶಶಾಂಕ್, ಜೆಜೆಸಿ ರಾಷ್ಟ್ರೀಯ ಪೂರ್ವ ಸಂಯೋಜಕ ಹಸ್ದುಲ್ಲಾ ಇಸ್ಮಾಯಿಲ್, ಪೂರ್ವಾಧ್ಯಕ್ಷರಾದ ಮಹಮ್ಮದಾಲಿ ಅಬ್ಬಾಸ್, ಗೋಪಾಲಕೃಷ್ಣ ಕಾಮತ್, ಅಜಿತ್ ಪ್ರಸಾದ್, ವಿನಯಚಂದ್ರ, ಸಪ್ತಾಹದ ಸಂಯೋಜಕ ಗುರುಪ್ರಸಾದ್, ಪ್ರದೀಪ್, ಸದಸ್ಯರಾದ ನವೀನ್ ಟಿ.ಆರ್, ಪುಷ್ಪರಾಜ್ , ಶ್ರೀ ಸಿಂಚನಾ ಸಹಕಾರಿಯ ಅಧ್ಯಕ್ಷ ಮೋಹನ ಪ್ರಭು ಹಾಗೂ ಜೆಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜೇಸಿವಾಣಿ ದಯಾನಂದ ವಾಚಿಸಿದರು. ಶಾಲಿನಿ ಪ್ರಸಾದ್ ವಲಯಾಧ್ಯಕ್ಷರ ಪರಿಚಯಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಚಿಣ್ಣರಿಗಾಗಿ `ಪುಟಾಣಿ ರಾಜ ರಾಣಿ’ ಸ್ಪರ್ಧೆಯನ್ನು ಆಯೋಜಿಸಲಾಯಿತು.
