ಮೂಡುಬಿದಿರೆ: ಶ್ರೀಗಣೇಶೋತ್ಸವ ಪ್ರಯುಕ್ತ ಭಾನುವಾರ ನಡೆದ ಪುರುಷರ ವಿಭಾಗದ 4ನೇ ವರ್ಷದ ಪ್ರೋ ಕಬಡ್ಡಿ ಮಾದರಿಯ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಆಳ್ವಾಸ್ ತಂಡವು ಫೈನಲ್ ಪಂದ್ಯಾಟದಲ್ಲಿ ತೆಂಕನಿಡಿಯೂರು ತಂಡವನ್ನು 33-12 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.

Alvas Kabaddi Champion (2)

Alvas Kabaddi Champion (1)
ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅಹ್ವಾನಿತ ತಂಡಗಳಿಂದ ಕಬಡ್ಡಿ ಪಂದ್ಯಾಟದಲ್ಲಿ 25,000 ನಗದು ಪ್ರಶಸ್ತಿ, ಟ್ರೋಫಿ ಪಡೆದು ಆಳ್ವಾಸ್ ಚಾಂಪಿಯನ್ ಆಗಿ ಮೂಡಿಬಂದಿದೆ. ಆಳ್ವಾಸ್‍ನ ಮಲ್ಲಿಕಾರ್ಜುನ ಬೆಸ್ಟ್ ಕ್ಯಾಚರ್ ಹಾಗೂ ವಿಶ್ವರಾಜ್ ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರಶಸ್ತಿ ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *