ಸುದ್ದಿ9 ಕೈಕಂಬ: ಲಯನ್ಸ್ ಕ್ಲಬ್ ಗುರುಪುರ-ಕೈಕಂಬ ಇದರ ವತಿಯಿಂದ ಹೈನುಗಾರಿಕೆಯ ಬಗ್ಗೆ ಮಾಹಿತಿ ಶಿಬಿರ ಅ.6 ಶನಿವಾರ ಬೆಳಗ್ಗೆ 9.30 ಗಣೇಶ ಕಟ್ಟೆಯ ಸಭಾಂಗಣದಲ್ಲಿ ಜರಗಿತು.
ಹೈನುಗಾರಿಕೆ ಮಾಹಿತಿ ಶಿಬಿರದ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲೆ ಕವಿತಾ ಶಾಸ್ತ್ರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅವರು ಗುರುಪುರ ಕೈಕಂಬದ ಲಯನ್ಸ್ ಕ್ಲಬ್ ವತಿಯಿಂದ ಇಂತಹ ಕಾಯಕ್ರಮವು ದಕ್ಷಿಣ ಕನ್ನಡದಲ್ಲೇ ಇದು ಪ್ರಥಮ ಬಾರಿಗೆ ಆಗುವ ಬಗ್ಗೆ ಸಂತಸ ವ್ಯಕ್ತ ಪಟ್ಟರು ಹೈನುಗಾರಿಕೆಗೆ ಗ್ರಾಮೀಣ ಪ್ರದೇಶದ ಜನರು ಮುಂದೆ ಬರಬೇಕು ಹೈನುಗಾರಿಕೆಯುಲ್ಲಿ ಸ್ವ ಉದ್ಯೋಗ ಮಾಡಿ ಹಲಾವಾರು ಕ್ರಷಿಕರು ಇದರ ಪ್ರಯೋಜನ ಪಡೆದಿದ್ದಾರೆ.
ಹೈನುಗಾರಿಕೆಯಲ್ಲಿ ಆಸಕ್ತಿ ಇದ್ದವರಿಗೆ ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಹಸು ಕರಿದಿಸಲು , ಹೈನುಗಾರಿಕೆ ಮಾಡಲು ಪ್ರೊತ್ಸಾಹನೀಡುವುದಾಗಿ ತಿಳಿಸಿದರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಗುರುಪುರ ಕೈಕಂಬದ ಅಧ್ಯಕ್ಷ ರೋಲ್ವಿನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ಕೆ.ಎಂ ಎಫ್ ನಿವ್ರತ ಆಡಳಿತಧಿಕಾರಿ ಎಂ.ಜಿ.ಹೆಗ್ಡೆ ಹೈನುಗಾರಿಕೆಯ ಬಗ್ಗೆ ಹಲವಾರು ವಿಷಯದಲ್ಲಿ ಮಾಹಿತಿ ನೀಡಿದರು.
ಹೈನುಗಾರಿಕೆಯಿಂದ ಲಾಭಗಳೇನು?
ಗ್ರಾಮೀಣ ಭಾಗದ ರೈತರು ತಮ್ಮ ಮನೆಯಲ್ಲಿ ಉತ್ಪದಾನೆಯ ಅಧಿಕ ಹಾಲನ್ನು ಸಮೀಪದ ಹಾಲು ಉತ್ಪಾದಕರ ಸಂಘಕ್ಕೆ ನೀಡಿ ಹಣಗಳಿಸಬಹುದು, ಹೈನುಗಾರಿಕೆಯಿಂದ ದೊರೆಯುವ ಸೆಗಣಿಯಿಂದ ಕೃಷಿಗೆ ಬೇಕಾಗುವ ಗೊಬ್ಬರಗಳನ್ನು ತಯಾರಿಸಿ ರಾಸಾಯಣಿಕ ರಹಿತವಾದ ತರಕಾರಿ ಹಣ್ಣುಹಂಪಲು ಬೆಳೆಯಬಹುದು, ಸೆಗಣಿಯಿಂದ ಗೋಬರ್ ಗ್ಯಾಸ್ನಿಂದ ಅಡಿಗೆ ತಯಾರಿಸಬಹದು. ಅಲ್ಲದೆ ಗೋಮೂತ್ರದಂದ ಅರ್ಕದಿಂದ ಹಲವಾರು ಔಷದಿಗಳನ್ನು ತಯಾರಿಸಿ ಪ್ರಯೋಜನ ಪಡೆಯಬಹುದು.
ದನಗಳನ್ನು ಕರೀದಿಸುವ ಮುಂಚೆ ದನದ ಕೊಟ್ಟಿಗೆ ಹೆಚ್ಚು ದುಬಾರಿಯಲ್ಲಿ ಮಾಡದೆ ಸಿಂಪಲ್ ಆಗಿ ಅಳವಡಿಸಬೇಕು ಉತ್ತಮತಳಿಯ ಮೇವಿನ ಬೀಜ ಬಿತ್ತಿ ಮೇವು ಬೆಳೆಯಬೇಕು ನಂತರ ಉತ್ತಮ ತಳಿಯ ಹಸುವನ್ನು ತಕೊಂಡು ಸಾಕಣೆ ಮಾಡಬೇಕು.
ವೇದಿಕೆಯಲ್ಲಿ ತಾ.ಪಂ. ಸದಸ್ಯ ಜಾನ್ಸನ್ ಲೋಬೊ, ಮಾಜಿ ಜಿಲ್ಲಾ ಪಂ ಸದಸ್ಯ ವಿನೋದ್ ಮಾಡ, ವಿನ್ನೀ ಲೋಬೊ, ಧರ್ಮಸ್ಥಳಗ್ರಾಮಾಬಿವೃದ್ಧಿ ಯೋಜಾನಾಧಿಕಾರಿ ಎಂ ರಾಘವ, ಕೆ.ಎಮ್ ಎಪ್ ಮಣಿಪಾಲ ಡೆಪ್ಟಿ ಮೆನೆಜರ್ ಶ್ರುತಿ, ಮಾದವ ಮಯ್ಯ, ಎಂ.ಎನ್.ರೈ ಲಯನ್ಸ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.















