ಸುದ್ದಿ9 ಕೈಕಂಬ:’ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರು ತಮ್ಮ ಸಮಸ್ಯೆಗಳನ್ನು ಪಂಚಾಯತ್ ಸದಸ್ಯರಲ್ಲಿ ಹೇಳಿದಾಗ ಪಂಚಾಯತ್ ಸಾಮನ್ಯ ಸಭೆಯಲ್ಲಿ ತಿಳಿಸಬೇಕು. ಸಮಸ್ಯೆ ಬಗೆಹರಿಸಲು ನಮ್ಮಿಂದ ಆಗುವ ಎಲ್ಲಾ ಪ್ರಯತ್ನ ಮಾಡುತ್ತೇವೆ’ ಎಂದು ಉಳಾಯಿಬೆಟ್ಟು ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಶ್ರೀಮತಿ ಲಲಿತರವರು ಹೇಳಿದರು.ಅವರು ಮಲ್ಲೂರು ಫಲ್ಗುಣಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಲ್ಲೂರು ಗ್ರಾಮದ ಎರಡನೇ ವಾರ್ಡ್ಗೆ ಸಂಬಂಧಿಸಿ ನಡೆದ ವಾರ್ಡ್ ಸಭೆಗಳ ಮಹತ್ವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಿಶಾ ಟ್ರಸ್ಟ್ ಕೈಕಂಬ ಮತ್ತು ನೇಸರ ಗ್ರಾಮ ಸಮಿತಿ ಮಲ್ಲೂರು ಇವರ ಆಶ್ರಯದಲ್ಲಿ ನಡೆದ ಕಾರ್ಯಗಾರದ ಸಭಾಅಧ್ಯಕ್ಷತೆಯನ್ನು ದಿಶಾ ಟ್ರಸ್ಟ್ ನ ಸಂಯೋಜಕರಾದ ಹೆನ್ರಿ ವಾಲ್ಡರ್ ವಹಿಸಿದ್ದರು. ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಜಾನೆಟ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ, ಮಲ್ಲೂರು ಗ್ರಾಮ ಕಮಿಟಿಯ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ದಿಶಾ ಟ್ರಸ್ಟ್ ನ ಕಾರ್ಯಕರ್ತರಾದ ಶ್ರೀಮತಿ ವಿನೋದ ಕಾರ್ಯಕ್ರಮ ನಿರೂಪಿಸಿದರು. ಸೈಂಟ್ ಅಲೋಶಿಯಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಜೂಲಿಯಟ್ ರೆಬೆಲ್ಲೋ ಸ್ವಾಗತಿಸಿದರು ಮತ್ತು ಡೈಸಿ ವಂದಿಸಿದರು.
