ಮೂಡುಬಿದಿರೆ: ಬೈಕ್‍ನಲ್ಲಿ ಬಂದು ಮಹಿಳೆಯರನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದ ವಿಕೃತಕಾಮಿಯನ್ನು ಸಾರ್ವಜನಿಕರೇ ರೆಡ್‍ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಇರುವೈಲ್ ಎಂಬಲ್ಲಿ ನಡೆದಿದೆ.
ವೃತ್ತಿಯಲ್ಲಿ ಅಡುಗೆ ತಯಾರಕನಾಗಿದ್ದ ಅಳಿಯೂರಿನ ಪ್ರಶಾಂತ್ ಜೈನ್ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದ ವ್ಯಕ್ತಿ. ಈತ ಇರುವೈಲ್‍ನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಮುಖ್ಯರಸ್ತೆ ಮತ್ತು ಒಳರಸ್ತೆಗಳಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಮಹಿಳೆಯರ ಬಳಿ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

iruvail crime
ಬೈಕ್‍ನಲ್ಲಿ ಬರುವ ಈತ ಮುಖಕ್ಕೆ ಬಟ್ಟೆಕಟ್ಟಿ ಹೆಲ್ಮೆಟ್ ಧರಿಸುತ್ತಿದ್ದ. ಇದರಿಂದಾಗಿ ಈತನ ಪರಿಚಯ ಹೆಚ್ಚಿನ ಮಹಿಳೆಯರಿಗಾಗುತ್ತಿರಲಿಲ್ಲ. ಆದರೆ ಈತನ ಉಪಟಳ ಹೆಚ್ಚಾಗುತ್ತಿದ್ದಂತೆ ಮಹಿಳೆಯರೇ ಒಟ್ಟಾಗಿ ಸೇರಿ ಸ್ಥಳೀಯ ಯುವಕರ ಜೊತೆ ಈತನನ್ನು ಹಿಡಿಯಲು ಮುಂದಾಗಿದ್ದರು. ಕಳೆದ ಶುಕ್ರವಾರವೂ ತನ್ನ ಚಾಳಿಯಂತೆ ಬೈಕ್‍ನಲ್ಲಿ ಬಂದು ಮಹಿಳೆಯೋರ್ವರಿಗೆ ಡ್ರಾಪ್ ಕೊಡುವ ಅಮಿಷ ತೋರಿದಾಗ ರೆಡ್‍ಹ್ಯಾಂಡಾಗಿ ಸೆರೆಸಿಕ್ಕಿದ್ದಾನೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *