ಮೂಡುಬಿದಿರೆ: ಸಮಾಜದಲ್ಲಿ ರೈತರಿಗೆ ಅಗ್ರಸ್ಥಾನಮಾನ ಸಿಗಬೇಕು. `ಜಾಗತಿಕ ಪಾಲಿಸಿ’ ಹಂತದಲ್ಲಿ ರೈತರಿಗೆ ಪ್ರಾಮುಖ್ಯತೆ, ಸವಲತ್ತು ಸಿಗುತ್ತಿಲ್ಲ. ರೈತ ಸಂಘಟನೆಗಳು ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಾದರೆ ರೈತರ ಉತ್ಪಾದನೆ, ಅದರಿಂದ ಬರುವಂತಹ ಫಲ ಮತ್ತು ಅದರ ಹಕ್ಕು ರೈತರಿಗೆನೇ ಸಿಗುವಂತೆ ಮಾಡಬೇಕು. ಈ ಮೂಲಕ ರೈತರ ಗುರುತಿಸುವ ಕೆಲಸ ಮಾತ್ರವಲ್ಲ, ಅವರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತಹ ವ್ಯವಸ್ಥೆಯಾಗಬೇಕು. ರೈತರ ಕಂಪೆನಿ ಸ್ಥಾಪನೆಯಾದಲ್ಲಿ ಹೆಚ್ಚಿನ ಪಾಲು ರೈತರಿಗೆ ಸಿಗುತ್ತದೆ. ರೈತರ ಕಂಪೆನಿ ಸ್ಥಾಪನೆಗೆ ಮೂಡುಬಿದಿರೆ ವಲಯದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮುನ್ನುಡಿ ಬರೆಯಲಿ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಆಶಯ ವ್ಯಕ್ತಪಡಿಸಿದರು.

Hasiru Sene Sangha Padagrahana (1)

ಇಲ್ಲಿನ ಸಮಾಜಮಂದಿರದಲ್ಲಿ ನಡೆದ ಹಸಿರುಸೇನೆ ಮೂಡುಬಿದಿರೆ ತಾಲೂಕು ಘಟಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘದ ನಿರ್ಗಮನ ಅಧ್ಯಕ್ಷ ಸುರೇಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡುಬಿದಿರೆ ತಾಲೂಕು ಘಟಕವು 28 ಗ್ರಾಮಗಳ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. 28 ಗ್ರಾಮಗಳಿರುವ ಘಟಕಗಳಿಗೆ ಪುನರುಜ್ಜೀವನಗೊಳಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.

Hasiru Sene Sangha Padagrahana (2)
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕುಜಂಬೆ, ಕಾರ್ಯಾಧ್ಯಕ್ಷ ರೂಪೇಶ್ ರೈ, ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಜಿಲ್ಲಾ ಸಂಘದ ಕೋಶಾಧಿಕಾರಿ ಇಬ್ರಾಹಿಂ ಖಲೀಲ್, ಜಿಲ್ಲಾ ಉಪಾಧ್ಯಕ್ಷ ಅಲ್ವಿನ್ ಮೆನೇಜಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೊನ್ಸಾ, ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಉಪಸ್ಥಿತರಿದ್ದರು.
ಖಾರ್ಯಕ್ರಮವನ್ನು ನಿರ್ಗಮನ ಕಾರ್ಯದರ್ಶಿ ಮಾರ್ಕ್ ಸಿರಿಲ್ ಪಿಂಟೋ ಸ್ವಾಗತಿಸಿದರು. ದಯಾನಂದ ಭಟ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಪ್ರಕಾಶ್ ಅಮೀನ್ ನಿರೂಪಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಲಿಯೋ ವಾಲ್ಟರ್ ನಝ್ರತ್ (ಅಧ್ಯಕ್ಷ), ಎಂ.ಸುರೇಶ್ ಕುಮಾರ್(ಗೌರವಾಧ್ಯಕ್ಷ), ವಾಮನ್ ಸಿ.ನಾಯ್ಕ್, ದಯಾನಂದ ಕೋಟ್ಯಾನ್(ಉಪಾಧ್ಯಕ್ಷರು), ಪ್ರಕಾಶ್ ಅಮೀನ್ (ಪ್ರಧಾನ ಕಾರ್ಯದರ್ಶಿ), ದಯಾನಂದ ಭಟ್( ಕೋಶಾಧಿಕಾರಿ), ಪದ್ಮನಾಭ ಎಸ್, ಶ್ರೀಧರ ಜೈನ್, ಜುಬೇರ್ ಅಲಂಗಾರ್(ಜೊತೆ ಕಾರ್ಯದರ್ಶಿ), ದಯಾನಂದ ನಾಯ್ಕ್, ಐವನ್ ಪಿಂಟೋ(ಸಂಘಟನಾ ಕಾರ್ಯದರ್ಶಿ), ಗ್ರೇಸಿ ರೊಡ್ರಿಗಸ್, ನಿರಿಜಾಕ್ಷಿ ಶೆಟ್ಟಿ( ಮಹಿಳಾ ಸಂಘಟನಾ ಕಾರ್ಯದರ್ಶಿ) ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *