ಕೈಕಂಬ : ಕೈಕಂಬದ ಸೂರಲ್ಪಾಡಿ ಬಳಿ ಸೋಮವಾರ ಸಂಜೆ ಎರಡು ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬಸ್ ಏಜೆಂಟ್ ಪೊಳಲಿಯ ಹರೀಶ್ ಶೆಟ್ಟಿ ಎಂಬವರನ್ನು ಅಡ್ಡಗಟ್ಟಿ            ತಲ್ವಾರಿನಿಂದ ಹಲ್ಲೆ ನಡೆಸಿ ಪರಾರಿಯಾದರು. ಶೆಟ್ಟಿಯವರು ಕೈಕಂಬದಿಂದ ಗಂಜಿಮಠದತ್ತ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

24vp harish shetty

ಘಟನೆ ಬಳಿಕ ಕೈಕಂಬ ಆಸುಪಾಸಿನಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿದ್ದು, ಬಜ್ಪೆ ಪೊಲೀಸ್ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ತಲೆ ಮತ್ತು ಕೈಗೆ ಗಂಭೀರ ಗಾಯವಾಗಿರುವ ಶೆಟ್ಟಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕೃತ ಮೂಲ ವೊಂದು ತಿಳಿಸಿದೆ. ಈ ಹಲ್ಲೆ ಘಟನೆಗೆ ಇನ್ನಷ್ಟೇ ಕಾರಣ ಗೊತ್ತಾಗಬೇಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹರೀಶ್ ಶೆಟ್ಟಿ ಹಿಂದೂ ಸಂಘಟನೆಯ ಕಾರ್ಯಕರ್ತ ಎನ್ನಲಾಗುತ್ತಿದ್ದು, ಮೂಡಬಿದ್ರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಇಮ್ತಿಯಾಜ್ ಹಲ್ಲೆ ಘಟನೆಗೆ ಪ್ರತೀಕಾರವಿರಬೇಕೆಂದು ಹೇಳಲಾಗುತ್ತಿದೆ.

 

By Suddi9

Leave a Reply

Your email address will not be published. Required fields are marked *