ಬಂಟ್ವಾಳ: ಇಲ್ಲಿನ ರೋಟರಿ ಕ್ಲಬ್‍ನ ವತಿಯಿಂದ ಆರಂಭಿಸಲಾದ ಸಂಚಾರಿ ತಾರಾಲಯ ಕಿರಿಯ ವಿದ್ಯಾರ್ಥಿಗಳು ಮಾತ್ರವಲ್ಲದೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶ್ಲಾಘನೆಗೂ ಪಾತ್ರವಾಗಿದೆ. ಬೆಂಜನಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಂಚಾರಿ ತಾರಾಲಯ ವೀಕ್ಷಣೆಗೆ ಸ್ಥಳೀಯ ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿ ಪ್ಲಾನಿಟೋರಿಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

rotary club btl
ಇಲ್ಲಿನ ಆರ್ಯಭಟ ಸಂಚಾರಿ ತಾರಾಲಯವನ್ನು ಕಳೆದ ಒಂದು ವಾರಗಳಿಂದ ಪ್ರದರ್ಶನ ನೀಡುತ್ತಿರುವ ಬಂಟ್ವಾಳ ರೋಟರಿ ಕ್ಲಬ್‍ನ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೋಡಿ ಸಂಭ್ರಮಿಸಿದ್ದರು. ಶನಿವಾರ ಬೆಂಜನಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಕೆನರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರಂಗನಾಥ್ ಭಟ್ ಅವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ವೀಕ್ಷಣೆಗೆ ಅವಕಾಶ ಮಾಡಿಕೊಡವಂತೆ ವಿನಂತಿಸಿಕೊಂಡ ಹಿನ್ನಲೆಯಲ್ಲಿ 60 ಮಂದಿ ಕೆನರಾ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವೀಕ್ಷಿಸಿ ಖುಷಿ ಪಟ್ಟರು. ಮಾತ್ರವಲ್ಲದೆ ಬ್ಯಾಹ್ಯಕಾಶ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ಮುಂದಿನ ಹಂತದಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಿ ಎಲ್ಲಾ ವಿದಾರ್ಥಿಗಳಿಗೂ ವೀಕ್ಷಣೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.
ಬೆಂಜನಪದವು ಸರಕಾರಿ ಪ್ರೌಢಶಾಲೆಯಲ್ಲಿ ಸಂಚಾರಿ ತಾರಾಲಯ ವೀಕ್ಷಣೆಗೆ ರೋಟರಿ ಸದಸ್ಯೆ ದಿವ್ಯಾಕರುಣಾಕರ ರೈ ಚಾಲನೆ ನೀಡಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಧ್ಯಕ್ಷ ಕರುಣಾಕರ ರೈ, ಪ್ರಾಂಶುಪಾಲ ಗಿರೀಶ್, ಶಿಕ್ಷಕಿಯರಾದ ಸುಜಾತ ರವಿಶಂಕರ್, ಹೇಮಾ ಉಪಸ್ಥಿತರಿದ್ದರು.
ರೋಹಿತ್ ನಾೈಕ್ ಅವರು ಪೆನ್ಸಿಲ್ ಚಿತ್ರಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

By suddi9

Leave a Reply

Your email address will not be published. Required fields are marked *