ಮೂಡುಬಿದಿರೆ:ಮೂಡುಬಿದಿರೆ ತಾಲ್ಲೂಕಿನ ನೂತನ ತಹಶಿಲ್ದಾರಾಗಿ ಕೆ. ಮಹೇಶ್ಚಂದ್ರ ಬುಧವಾರ ಅಧಿಕಾರ ಸ್ವೀಕರಿಸಿದರು.
ಇವರು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕು ತಹಶಿಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಂದ ಮೂಡುಬಿದಿರೆಗೆ ವರ್ಗಾವಣೆಗೊಂಡಿದ್ದಾರೆ. ಮೂಡುಬಿದಿರೆಯ ಪ್ರೊಬೆಶನರಿ ತಹಶಿಲ್ದಾರಾಗಿದ್ದ ರಶ್ಮಿ ಅವರು ದ.ಕ ಜಿಲ್ಲಾಧಿಕಾರಿ ಕಚೇರಿಗೆ ಮರಳಿದ್ದಾರೆ.
