ಮೂಡುಬಿದಿರೆ: ಇಲ್ಲಿನ ಪದ್ಮಾವತಿ ಕಲಾಮಂದಿರದಲ್ಲಿ ಸೆ. 22 ರಂದು ಶನಿವಾರ ಅಪರಾಹ್ನ 2 ಗಂಟೆಗೆ `ಪಾದುಕಾ ಪ್ರದಾನ’ (ಸುಣ್ಣೆಂಬಳ,ಕಲ್ಚಾರ್,ಡಾ|ಗಾಳಿಮನೆ), `ಭೀಷ್ಮ ವಿಜಯ’ (ಉಜಿರೆ, ಪೆರ್ಮುದೆ), `ಕೃಷ್ಣ ಸಂಧಾನ’ (ತಲಪಾಡಿ ಸದಾಶಿವ, -ಜಬ್ಬಾರ್) ಎಂಬ ಪ್ರಸಂಗಗಳ ತಾಳಮದ್ದಳೆಯನ್ನು ವಾದ-ಸಂವಾದ ಸ್ವರೂಪದಲ್ಲಿ ಸಂಯೋಜಿಸಲಾಗಿದ್ದು, ಜನ್ಸಾಲೆ-ಎಚ್.ಜಿ.ಶಿವಶಂಕರ (ದ್ವಂದ್ವ), ಯಲ್ಲಾಪುರ, ಶ್ರೀಕಾಂತ ಹಿಮ್ಮೇಳದಲ್ಲಿ ಸಹಕರಿಸಲಿದ್ದಾರೆ.
ಆಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಸಂಘಟಕ ಮೂಡುಬಿದಿರೆ ಸ್ಕೈಪೈಂಟ್ಸ್ ನ ಪ್ರವರ್ತಕ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.
