ಮೂಡುಬಿದಿರೆ : ಇಲ್ಲಿನ ನಾಡಕಛೇರಿ ಬಳಿ ನೂತನವಾಗಿ ಆರಂಭಗೊಂಡಿರುವ ಶಾಸಕರ ಕಛೇರಿ “ಸೇವಕ”ವನ್ನು ವಿರೋಧಪಕ್ಷದ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

SEVAKA INOGRATION (2)

ನಂತರ ಮಾತನಾಡಿದ ಅವರು, ಜನಸಾಮಾನ್ಯರ ಸಮಸ್ಯೆಯನ್ನು ಅರಿತು ಪರಿಹಾರ ನೀಡಲು ಶಾಸಕರ ಕಛೇರಿ “ಸೇವಕ” ಸಹಕಾರಿಯಾಗಲಿದೆ. ಕರೆಂಟ್ ಬಿಲ್ಲ್ ಕಟ್ಟಲು, ಆರ್‍ಟಿಸಿಯನ್ನು ಕಟ್ಟಲು ಜನರು ಕಛೇರಿಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದರು. ಈ ನಿಟ್ಟಿನಲ್ಲಿ ಗ್ರಾಮಪಂಚಾಯತ್‍ಗಳಲ್ಲಿ ನೂರು ಸೇವೆಯನ್ನು ಕೊಡಬೇಕೆಂಬ ಉದ್ದೇಶದಿಂದ ಬಾಪೋಜಿ ಕೇಂದ್ರವನ್ನು ತೆರೆಯಲಾಯಿತು ಆದರೆ ಅಲ್ಲಿ ನೂರು ಸೇವೆಗಳನ್ನು ನೀಡುವುದಿರಲಿ ಒಂದು ಸೇವೆಯನ್ನು ಕೊಡಲು ಸಾಧ್ಯವಾಗಿಲ್ಲವೆಂದು ಖೇಧವ್ಯಕ್ತಪಡಿಸಿದರು.
ಸರಕಾರಿ ಯಂತ್ರಗಳು ಜಟಿಲವಾದಾಗ ಬಡಜನರು ತಮ್ಮ ಸಮಸ್ಯೆಗಳನ್ನು ಹಿಡಿದು ಸೇವಕ ಕಛೇರಿಗೆ ಬಂದಾಗ ಸೌಜನ್ಯ ತಾಳ್ಮೆಯಿಂದ ಬಡವನ ನಾಡಿಮಿಡಿತಕ್ಕೆ ಸ್ಪಂದಿಸುವ ಕೆಲಸ ಈ ಕಛೇರಿಯಿಂದಾಗಲಿ ಎಂದು ಹಾರೈಸಿದರು.

SEVAKA INOGRATION (1)

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಮನ ಸೇವಕ ಆಂಜನೇಯ. ಭಕ್ತಿ ಭಾವನೆಯಿಂದ ಆಂಜನೇಯ ರಾಮನ ಸೇವೆಯನ್ನು ಆಂಜನೇಯ ಮಾಡಿದ ಅದರಂತೆ ಉಮಾನಾಥ ಕೋಟ್ಯಾನ್ ಕೂಡಾ ಈ ಕ್ಷೇತ್ರದ ಮತದಾರ ಬಾಂಧವರ ಸೇವಕ ಅವರು ಆಂಜನೇಯನಂತೆಯೆ ಸೆಟೆದು ನಿಂತು ಬಡವರ ಕೆಲಸ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನಾನು ಜನರ ಸೇವಕ. ತಹಶೀಲ್ದಾರ್ ಕಛೇರಿಯಲ್ಲಿ ಕೆಲಸಗಳು ವಿಳಂಬವಾಗುತ್ತಿದೆ ಎಂಬ ದೂರುಗಳಿವೆ. ಇವುಗಳನ್ನು ಸರಿಪಡಿಸಲು ತಾವು ಹತ್ತಿರದಲ್ಲಿಯೇ ಇದ್ದರೆ ಸಹಕಾರಿಯಾಗಲಿದೆ ಈ ನಿಟ್ಟಿನಲ್ಲಿ ತಹಶೀಲ್ದಾರ್ ಕಛೇರಿ ಬಳಿಯೇ ಕಛೇರಿಯನ್ನು ತೆರೆಯಲಾಗಿದೆ ಎಂದು ಹೇಳಿದರು.

SEVAKA INOGRATION (3)

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ಪಿ ಜಗದೀಶ ಅಧಿಕಾರಿ, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಎಂ, ಬ್ರಿಜೇಶ್ ಚೌಟ, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಎಂ.ಎಸ್ ಕೋಟ್ಯಾನ್, ಭುವನಾಭಿರಾಮ ಉಡುಪ’ಚೌಟರ ಅರಮನೆಯ ಕುಲದೀಪ ಎಂ, ಉದ್ಯಮಿ ಕೆ.ಶ್ರೀಪತಿ ಭಟ್, ಶ್ರೀ ಹನುಮಂತ ಮತ್ತು ವೆಂಕಟರಮಣ ದೇವಸ್ಥಾನಗಳ ಮೊಕ್ತೇಸರ ಜಿ.ಉಮೇಶ್ ಪೈ, ಬಿಜೆಪಿ ಮುಖಂಡ ಕೆ.ಆರ್.ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು ವಂದಿಸಿದರು.

By Suddi9

Leave a Reply

Your email address will not be published. Required fields are marked *