• ಬಡಗಬೆಳ್ಳೂರು : ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ(ರಿ) ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಸವಿತಾ ಎನ್ ಶೆಟ್ಟಿ ಅಧ್ಯಕ್ಷತೆಯಲ್ಲಿ  ಕೊಳತ್ತ ಮಜಲು ಸಂಘದ ಕಚೇರಿಯಲ್ಲಿ ಜರುಗಿತು.gur-sep-19-badagabelluru-1ಕಳೆದ ಹಣಕಾಸು ವರ್ಷದಲ್ಲಿ ಸಂಘಕ್ಕೆ 4,47,541.54 ರೂ ಲಾಭ ಬಂದಿದೆ. ಶೇ 65 ಬೋನಸ್ ಮತ್ತು ಶೇ 15 ಡಿವಿಡೆಂಡ್ ನೀಡಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ ಜಿಲ್ಲಾ ಹಾಲು ಒಕ್ಕೂಟದ ಉಪ-ವ್ಯವಸ್ಥಾಪಕ ಡಾ. ಟಿ. ವಿ. ಶ್ರೀನಿವಾಸ್ ಮಾತನಾಡುತ್ತ, ಹೈನು ರಾಸುಗಳ ನಿರ್ವಹಣೆ, ಅವುಗಳಿಗೆ ಬರುವ ರೋಗ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.gur-sep-19-badagabelluru-2ಹೈನುಗಾರರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿಸ್ತರಣಾಧಿಕಾರಿ ಅಬ್ದುಲ್ ಸಮೀರ್ ಮಾಹಿತಿ ನೀಡಿದರು. ಸಂಘದ ಸದಸ್ಯರಾದ ಪ್ರವೀಣ ಟಿ ಸ್ವಾಗತಿಸಿದರು. ಗೀತಾ ಮೇಲಂಟ ವಂದಿಸಿದರು.

By Suddi9

Leave a Reply

Your email address will not be published. Required fields are marked *