ಕೈಕಂಬ: ಕರಿಯಂಗಳ ಗ್ರಾಮ ಸಾಣೂರುಪದವಿನಲ್ಲಿ ಗುಡ್ಡೆಗೆ ಮೇಯಲು ಬಿಟ್ಟ ದನವನ್ನು ಕಳವಿಗೆ ಯತ್ನಿಸಿದ ಘಟನೆ ಸೆ.4ರ ಸಂಜೆ ನಡೆದಿದೆ.
ಸಾಣೂರುಪದವಿನ ವೀಣಾಉಪೇಂದ್ರ ಆಚಾರ್ಯ ಅವರು ತನ್ನ ಮನೆಗೆ ಜೆರ್ಸಿ ದನವೊಂದನ್ನು ಖರೀದಿಸಿ ತಂದಿದ್ದರು. ಈ ದನವನ್ನು ದಿನಲೂ ಗುಡ್ಡೆಗೆ ಮೇಯಲು ಬಿಡುತ್ತಿದ್ದರು. ಅದರಂತೆ ನಿನ್ನೆಯೂ ಬೆಳಿಗ್ಗೆ ದನವನ್ನು ಗುಡ್ಡೆಗೆ ಮೇಯಲು ಬಿಟ್ಟಿದ್ದರು.
.

ಆದರೆ ಸಂಜೆಯ ವೇಳೆಗೆ ಆಡಲು ಹೋಗಿದ್ದ ಮಕ್ಕಳಿಗೆ ಗುಡ್ಡದಲ್ಲಿ ಕೈಕಾಲುಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಹಸು ಕಂಡುಬಂದಿತ್ತು. ಆಗ ಮಕ್ಕಳ ತಕ್ಷಣ ಬೊಬ್ಬೆಹೊಡೆದು ಊರವರನ್ನು ಸೇರಿಸಿದ್ದರು. ಈ ವೇಳೆ ದನಕಳ್ಳರು ಗುಡ್ಡದಿಂದ ತಪ್ಪಿಸಿಕೊಂಡು ಹೋಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ದನದ ಮೈಮೇಲೆ ಗಾಯದ ಗುರುತುಗಳಿದ್ದು, ಅದುದಯನೀಯ ಸ್ಥಿತಿಯಲ್ಲಿ ವೇದನೆ ಪಟ್ಟಿತ್ತು ಎಂದು ಮನೆಯವರು ತಿಳಿಸಿದ್ದಾರೆ.
ತಕ್ಷಣ ಸ್ಥಳೀಯ ಯುವಕರು ಹಸುವಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅದಕ್ಕೆ ಉಪಚಾರ ನೀಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲದಿದ್ದರೆ ಹಸು ಕಳ್ಳರಪಾಲಾಗುತ್ತಿತ್ತು ಎನ್ನಲಾಗಿದೆ.
ಇತ್ತೀಚೆಗೆ ಕರಿಯಂಗಳ -ಸಾಣೂರುಪದವು, ಅರ್ಲ, ಕೆಂಪುಗುಡ್ಡೆ, ಬಡಕಬೈಲು, ಕಲ್ಪನೆ, ಅಮ್ಮುಂಜೆಸುತ್ತಮುತ್ತ ದನಕಳ್ಳರ ಕಾಟ ಮಿತಿಮೀರುತ್ತಿದ್ದು, ಹಲವಾರು ಹಸುಗಳು ಸದ್ದಿಲ್ಲದೆ ದನಕಳ್ಳರ ಪಾಲಾಗಿದೆ.
