nikitha nikitha--ಸುದ್ದಿ9 ಕೈಕಂಬ: ಮಂಗಳೂರಿನ ಪುರಭವನದಲ್ಲಿ ಆ.31ರಂದು ನಡೆದಿದ್ದ ಪಾಶ್ಚಾತ್ಯ ಶೈಲಿಯ, ವೆಸ್ಟೆರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಜೋಜಿಸಿದ ಡ್ಯಾನ್ಸ್ ಸ್ಪಧರ್ೆಯಲ್ಲಿ ಮಳಲಿ ಮಟ್ಟಿಯ ನಿಖಿತಾ ಜೋಗಿ. ಮಟ್ಟಿ ದ್ವಿತೀಯಾ ಸ್ಥಾನ ಗಳಿಸಿದ್ದಾಳೆ. ಈಕೆ ರೋಸಾಮಿಸ್ತಿಕ ಶಾಲೆಯ 9ನೇ ತರಗತಿಯ ವಿದ್ಯಾಥರ್ಿನಿಯಾಗಿದ್ದು, ಮಳಲಿ ಮಟ್ಟಿಯ ರಾಮ ಹಾಗೂ ಸ್ಯಾಮಲ ಎಂಬವರ ಪುತ್ರಿಯಾಗಿದ್ದಾಳೆ. ಈಕೆ ಜ್ಯೂನಿಯರ್ ವಿಭಾಗದ ಸೋಲೋಡ್ಯಾನ್ಸ್ನಲ್ಲಿ ಸಾಧನೆ ಮೆರೆದಿದ್ದಾಳೆ. ಈ ವಿಭಾಗದಲ್ಲಿ ಒಟ್ಟು ಮೂವತ್ತಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಇವರನ್ನೆಲ್ಲಾ ಹಿಂದಿಕ್ಕಿ ಗ್ರಾಮೀಣ ಪ್ರತಿಭೆ ನಿಖಿತಾ ದ್ವಿತೀಯ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈಕೆಗೆ ಥಂಡರ್ ಗೈಸ್ ಬಜ್ಪೆ ಡ್ಯಾನ್ಸ್ ತಂಡದ ಸೂರಜ್ ಶೆಟ್ಟಿ ಎಂಬವರು ತರಬೇತಿ ನೀಡಿದ್ದರು. ಇವರು ಸುಮಾರು ಮೂವತ್ತಕ್ಕೂ ಅಧಿಕ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿದ್ದು, ಇಲ್ಲಿನ ಮಕ್ಕಳು ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಈಕೆಗೆ ಹರಿಣಿ ಮದನಿ ಎಂಬವರು ಕೊರಿಯೋಗ್ರಫಿ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನ ಜನಪ್ರಿಯ ನಟಿ ಶುಭಾ ಪೂಂಜಾ ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಿದರು. 4 57 6

By suddi9

2 thoughts on “ಪಾಶ್ಚಾತ್ಯ ಶೈಲಿಯ ನೃತ್ಯದಲ್ಲಿ ನಿಖಿತಾ ಜೆ. ಮಟ್ಟಿ ದ್ವಿತೀಯ”

Leave a Reply

Your email address will not be published. Required fields are marked *