ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೆನಕ ಮಠಪದಲ್ಲಿ ಗುರುವಾರ ಬೆಳಗ್ಗೆ 7.ಗಂಟೆಗೆ ಶ್ರೀ ವಿಘ್ನೇಶ್ವರ ದೇವರ ವಿಗ್ರಹವು ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮದಿರದಿಂದ ಮೆರವಣಿಗೆಯಲ್ಲಿ ಅಡ್ಡೂರು ಬೆನಕ ಮಂಟಪಕ್ಕೆ ಬಂದು 9.30ಕ್ಕೆ ಪೊಳಲಿ ಶ್ರೀ ರಾಜರಾಜೇರ್ಶವರೀ ದೇವಸ್ಥಾನದ ಪ್ರಧಾನ ಅರ್ಚಕರು ವಿಗ್ರಹ ಪ್ರತಿಷ್ಠಾಪಿಸಲಿದ್ದು. ನಂತರ ನಾನಾ ಭಜನಾಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.
12.ಗಂಟೆಗೆ ಗಣಹೋಮ ಪೂರ್ಣಾಹುತಿ 12.30ಕ್ಕೆ “ಮಹಾಪೂಜೆ” ಮಧ್ಯಾಹ್ನ 1.30ರಿಂದ 5 ಗಂಟೆಯವರೆಗೆ ತುಳುಹಾಸ್ಯಮಯನಾಟಕ “ಅಂಚ್ಚಾಯಿನೆಟ್ ಇಂಚ್ಚಾಂಡ್” ಸಂಜೆ 5 ಗಂಟೆಯಿಂದ ಸಮಾರೋಪ ಸಮಾರಂಭದಲ್ಲಿ ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿಶ್ರೀ ಅನಂತಪದ್ಮನಾಭ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಉತ್ತರ ವಿಧನ ಸಭಾ ಸಾಸಕ ಡಾ.ವೈ ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಮಂಜುಳಾ ಶೆಟ್ಟಿ ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ.ಗುರುಪುರ ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಸುರೇಂದ್ರ ಕಂಬಳಿ, ಉದ್ಯಮಿ ಎ.ಕೆ.ಹನೀಫ್ ,ಗುರುಪುರ ವ್ಯ.ಸೇ. ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ ಮುಖ್ಯ ಅತಿಥಗಲಗಿ ಭಗವಹಿಸಲಿದ್ದಾರೆ ಎಂದು ಅಡ್ಡೂರು ಗಣೇಶೋತ್ಸವ ಸೇವಾ ಸಮಿತಿಯ ಪ್ರಕಟನೆ ತಿಳಿಸಿದೆ.
