ನವದೆಹಲಿ: ಭವಿಷ್ಯಕ್ಕೆ ಆಸರೆಯಾಗಲಿದೆ ಎನ್ನುವ ದೃಷ್ಟಿಯಿಂದ ವಿಮೆಯ ಮೊದಲ ಪ್ರೀಮಿಯಂ ಅನ್ನು ಉತ್ಸಾಹದಿಂದ ಕಟ್ಟುವ ಶೇ.25ರಷ್ಟು ಮಂದಿ ಮಾರನೇ ವರ್ಷವೇ ಸುಮ್ಮನಾಗಿ ಬಿಡುತ್ತಾರೆ ಎಂದು ಆರೋಪಿಸಲಾಗುತ್ತಿದ್ದು, ಹಾಗೇ ಜನ ಕ ಟ್ಟಿದ ಹಣ ಪ್ರತಿ 5000 ಕೋಟಿ ರೂ ಅಂತೆ ಹೇಳಲಾಗಿದೆ. ವಿಮೆ ಪಾಲಿಸಿಗಳು ಸರಿಯಾಗಿ ಪ್ರೀಮಿಯಂ ಪಾವತಿಸದಿರುವುದರಿಂದ ಲ್ಯಾಫ್ಸ್ ಆಗುತ್ತಿದೆ.

ಮೊದಲ ವರ್ಷದ ಬಳಿಕ ಪ್ರೀಮಿಯಂ ಪಾವತಿಸದೇ ಹೋದರೆ, ಪಾಲಿಸಿದಾರನು ತಾನು ಕಟ್ಟಿದ ಬಹುತೇಕ ಎಲ್ಲ ಮೊತ್ತವನ್ನೂ ಕಳೆದುಕೊಳ್ಳುತ್ತಾನೆ. ಹಾಗಾಗಿ ಆ ವೇಳೆಯಲ್ಲಿ ಒಟ್ಟು ಗ್ರಾಹಕರ ಹಣವನ್ನು ಲೆಕ್ಕ ಹಾಕಿದ ವೇಳೆಯಲ್ಲಿ ಪ್ರತಿ ವರ್ಷ 5000 ಕೋಟಿ ರೂ ವಿಮೆ ಪಾಲಿಸಿಗಳು ಸರಿಯಾಗಿ ಪ್ರೀಮಿಯಂ ಪಾವತಿಸದಿರುವುದರಿಂದ ಎಲ್ಐಸಿ ಗೆ ಹಣ ಸಿಗಲಿದೆ ಅಂತ ಅಂದಾಜು ಮಾಡಲಾಗಿದೆ.
