ಮೂಡುಬಿದಿರೆ: ‘ಭಾರತದಲ್ಲಿ ಹೆಣ್ಣಿನ ಸ್ಥಾನಮಾನ, ಹೆಣ್ಣಿಗಿರುವ ಗೌರವ ಅನನ್ಯವಾದುದು. ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾಗಾಂಧಿ, ಕಿರಣ್ ಬೇಡಿಯವರ ಸಾಧನೆ ಅನುಕರಣೀಯವಾದುದು. ಇವರ ಬದುಕಿನಿಂದ ಪ್ರೇರಣೆ ಪಡೆದು ಇಂದಿನ ಸ್ತ್ರೀಯರು ಭಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಿದೆ’ ಎಂದು ಮೂಡುಬಿದಿರೆಯ ವಕೀಲರಾದ ಶ್ವೇತಾ ಅವರು ಹೇಳಿದರು.
ಇವರು ಇತ್ತೀಚಿಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಸಮಿತಿಯ ವತಿಯಿಂದ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನುಡಿದರು.

alvas PU
ಪ್ರಸ್ತುತವಾಗಿ ಸಮಾಜದಲ್ಲಿ ಸ್ತ್ರೀಯರು ಎದುರಿಸುತ್ತಿರುವ ಸಮಸ್ಯೆಗಳು ಅನೇಕ ಇವೆ. ಇವುಗಳನ್ನು ಕಾನೂನಾತ್ಮಕವಾಗಿ ಎದುರಿಸಿ, ಕುಗ್ಗದೆ ಬಗ್ಗದೆ ಎದ್ದು ನಿಂತು ಪರಿಸ್ಥಿತಿಯನ್ನು ಎದುರಿಸುವ ಛಲ ಪ್ರತಿಯೊಬ್ಬ ಮಹಿಳೆಗೂ ಇರಬೇಕು. ಶೋಷಣೆಗೆ ಒಳಗಾದಲ್ಲಿ ಸರಿಯಾದ ರೀತಿಯಲ್ಲಿ ಹೋರಾಡಿ ತನ್ನ ಅಸ್ತಿತ್ವವನ್ನು ವಸ್ತು ಅನನ್ಯತೆಯನ್ನು ಆಕೆ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಬಳಿಕ ವಿದ್ಯಾರ್ಥಿನಿಯರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪೆÇ್ರ. ರಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಸಮಿತಿಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಂಜನಾ ಭಟ್ ಸ್ವಾಗತಿಸಿ, ನಿರೂಪಿಸಿದರು ಮತ್ತು ನಿಕಿತಾ ಪೈ ವಂದಿಸಿದರು.

By suddi9

Leave a Reply

Your email address will not be published. Required fields are marked *