ಅಡ್ಯನಡ್ಕ: ಜನತಾಪದವಿ ಪೂರ್ವಕಾಲೇಜಿನಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಉಪನ್ಯಾಸಕ ವೃಂದದವರು ಉತ್ಸಾಹದಿಂದ ಪಾಲ್ಗೊಂಡು ಬಹುಮಾನಗಳನ್ನು ಪಡೆದುಕೊಂಡರು.

shikshana dinacharane
ನಂತರ ಸಭಾಕಾರ್ಯಕ್ರಮದಲ್ಲಿ ಶಿಕ್ಷಣಪ್ರೇಮಿ, ಸಾಹಿತಿ ಭಾಸ್ಕರ ಅಡ್ವಳರು ಕಾಲೇಜಿನ ಸೇವಾ ದಳ ಘಟಕವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸೇವಾ ದಳ ಘಟಕದ ಅಗತ್ಯತೆಯನ್ನು ವಿವರಿಸಿದರು.
ಕೃಷಿ ತಜ್ಞರಾದ ಬಿಲ್ಲಂಪದವು ನಾರಾಯಣ ಭಟ್ ಇವರು ಸ್ವಾಭಾವಿಕವಾಗಿ ತರಕಾರಿ ಹಾಗೂ ಇತರ ಬೆಳೆಗಳಫಸಲನ್ನುಹೆಚ್ಚಿಸುವ ವಿಧಾನವನ್ನುವಿವರಿಸಿದರು. ಪ್ರಾಂಶುಪಾಲರಾದ ಡಿ.ಶ್ರೀನಿವಾಸ್‍ಪ್ರಸ್ತಾವಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಆಯೋಜಿಸಿಅಚ್ಚುಕಟ್ಟಾಗಿನಿರ್ವಹಿಸುತ್ತಿದ್ದುಎಲ್ಲರ ಪ್ರಶಂಸೆಗೆಪಾತ್ರರಾದರು. ವಿದ್ಯಾರ್ಥಿ ನಾಯಕಶಿವಪ್ರಸಾದ್‍ಸ್ವಾಗತಿಸಿ, ಕೃಷ್ಣಶರ್ಮಕಾರ್ಯಕ್ರಮನಿರೂಪಿಸಿ, ಲಿಶ್ಮಿತಡಿಸೋಜ ವಂದಿಸಿದರು

By suddi9

Leave a Reply

Your email address will not be published. Required fields are marked *