ವಿಟ್ಲ: ಪ್ರೌಢ ಶಾಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಕವನ ಮತ್ತು ಕಥಾ ರಚನಾ ಶಿಬಿರ ನಡೆಯಿತು.

katha rachane

ನಿವೃತ್ತ ಶಿಕ್ಷಕ, ಮಕ್ಕಳ ಸಾಹಿತಿ ವಿ ಮ ಭಟ್ ಅಡ್ಯನಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರ ನಡೆಸಿ ಕೊಟ್ಟರು. ಭೂತಾಯಿ ತಾಯ್ನಾಡಿಗೆ ನಮನ ಸಲ್ಲಿಸುವ ಹಾಡಿನ ಮೂಲಕ ಆರಂಭಗೊಳಿಸಿದ ಅವರು ಕನ್ನಡ ಸಮ್ಮ ಶಕ್ತಿ, ಯಾವುದು ಹಿತವನ್ನು ಉಂಟು ಮಾಡುವುದೋ ಅದು ಸಾಹಿತ್ಯ ಎಂದರು.
ಸಂಘದ ಸದಸ್ಯರಾದ ಶಿಕ್ಷಕ ಶಂಕರನಾರಾಯಣ ಪ್ರಸಾದ, ಭಾರತಿ, ಚಂದ್ರಕಲಾ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕನ್ನಡ ಶಿಕ್ಷಕಿ ಗೀತಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಚಣಿಲ ಪ್ರಸ್ತಾವಿಸಿ ಪರಿಚಯಿಸಿದರು. ನಂದಿತಾ, ಸಹನಾ, ಪಾವನಾ ಮತ್ತು ಮಹಾಲಕ್ಷ್ಮಿ ಪ್ರಾರ್ಥಿಸಿದರು. ಸೀತಾಲಕ್ಷ್ಮಿ ವರ್ಮ ವಂದಿಸಿದರು.

By suddi9

Leave a Reply

Your email address will not be published. Required fields are marked *