ಬಂಟ್ವಾಳ: ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.3ರಂದು ನಡೆಯಿತು.

SHV_5569
ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರೀಯಾ ಶಾಮಿಯಾನಾದ ಬಾಬು ಕೆ ವಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಬಡ್ಡಿ ಅಸೋಸಿಯೇಷನ್ ಸದಸ್ಯರಾದ ರಮಾನಾಥ ವಿಟ್ಲ, ರಾಷ್ಟ್ರ ಮಟ್ಟದ ಈಜುಗಾರ ತುಳಸೀದಾಸ ಶೆಣೈ ವಿಟ್ಲ, ಅಂತರರಾಷ್ಟ್ರೀಯ ಹಿರಿಯ ಕ್ರೀಡಾಪಟು ಶಂಕರ ವಿ ಕಲ್ಲಡ್ಕ, ದೈಹಿಕ ಶಿಕ್ಷಕರ ಸಂಘದಗೌರವ ಸಲಹೆಗಾರ ಗಂಗಾಧರರೈ ಮಾಣಿ, ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಶಮೀರ್ ಪಳಿಕೆ, ಶಾಲಾ ದೈಹಿಕ ಶಿಕ್ಷಕರಾದ ವಿದ್ಯಾಶಂಕರ ಡಿ. ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ ಹೆಚ್ ಸ್ವಾಗತಿಸಿದರು, ಕೇಪು ಶಾಲೆಯ ದೈಹಿಕಶಿಕ್ಷಕರಾದ ಸುರೇಶ್ ಶೆಟ್ಟಿ ನಿರೂಪಿಸಿದರು. ಚಂದಳಿಕೆ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಗೌಡ ಕುಳಾಲು ವಂದಿಸಿದರು.
ಕಬಡ್ಡಿ ಫಲಿತಾಂಶ ವಿವರ:
ಪಂದ್ಯಾಟದಲ್ಲಿ ಬಾಲಕರ ವಿಭಾಗದ ಪ್ರಥಮ ಸ್ಥಾನವನ್ನು ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ, ದ್ವಿತೀಯ ಸ್ಥಾನವನ್ನು ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಮೊರಾರ್ಜಿ ವಸತಿ ಶಾಲೆ ವಗ್ಗ ಪಡೆದು ಕೊಂಡಿತು.
ಬಾಲಕರ ವಿಭಾಗದ ಉತ್ತಮ ದಾಳಿಗಾರ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮಹಮ್ಮದ್ ಮುಹಾಸ್ ,ಉತ್ತಮ ಹಿಡಿತಗಾರ ವಿಟ್ಲ ಮಾದರಿ ಶಾಲೆಯ ಕಿಶನ್, ಉತ್ತಮ ಸವ್ಯಸಾಚಿ ಸ್ಥಾನವನ್ನು ತೌಹೀದ್ ಆಂಗ್ಲ ಮಾಧ್ಯಮದ ಮಹಮ್ಮದ್ ರಾಝೀಕ್ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಗ್ಗ ದ ಶ್ರಾವ್ಯ ,ಉತ್ತಮ ಹಿಡಿತಗಾರ್ತಿ ವಿಟ್ಲ ಮಾದರಿ ಶಾಲೆಯ ರೇಷ್ಮಾ, ಉತ್ತಮ ಸವ್ಯಸಾಚಿ ವಿಟ್ಲ ಮಾದರಿ ಶಾಲೆಯ ರೇಖಾ ಪಡೆದುಕೊಂಡರು.

By Suddi9

Leave a Reply

Your email address will not be published. Required fields are marked *