ಬಂಟ್ವಾಳ: ಕೆಳಗಿನ ವಗ್ಗ ನಿವಾಸಿ, ನಿವೃತ್ತ ಶಿಕ್ಷಕ ವಗ್ಗ ಗೋಪಾಲಕೃಷ್ಣ ಪ್ರಭು( 84) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.

ನಿವೃತ್ತ ಶಿಕ್ಷಕರಾಗಿದ್ದ ಇವರು ಪ್ರಗತಿಪರ ಕೃಷಿಕರಾಗಿ, ವಿದ್ಯುತ್ ಬಳಕೆದಾರರ ವೇದಿಕೆ, ಪಿಂಚಣಿದಾರರ ಹೋರಾಟ ಸಮಿತಿ, ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ, ಕುಡಾಳ ದೇವಸ್ಯ ಆದ್ಯ ಗೌಡ ಬ್ರಾಹ್ಮಣ ಸಮಾಜ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಮೂವರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.
