ನ್ಯೂಯಾರ್ಕ್:  ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ  ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ಯುಎಸ್ ಓಪನ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟಫೈನಲ್ ಪಂದ್ಯದಲ್ಲಿ ಎದುರಾಳಿ ಜೋಡಿ ಅರ್ಧಕ್ಕೆ ನಿವೃತ್ತಿ ಪಡೆದ ಹಿನ್ನೆಲೆಯಲ್ಲಿ ಸಾನಿಯಾ-ಕಾರಾ ಜೋಡಿ ಸುಲಭವಾಗಿ ಸೆಮೀಸ್ ಪ್ರವೇಶಿಸಿತು. 3ನೇ ಶೇಯಾಂಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಜಕಸ್ತಾನದ ಜರಿನಾ ದಿಯಾಸ್ ಮತ್ತು ಚೀನಾದ ಯಿಫಾನ್ ಕ್ಸೂ ಜೋಡಿ ವಿರುದ್ಧ ೬-೧, ೧-೦ ಅಂತರದಿಂದ ಮುನ್ನಡೆ ಸಾಧಿಸುತ್ತಿದ್ದಂತೆ, ಕಜಕಸ್ಥಾನ ಮತ್ತು ಚೀನಾ ಜೋಡಿ ಪಂದ್ಯದಲ್ಲಿ ಅರ್ಧಕ್ಕೆ ಹಿಂದೆ ಸರಿಯಿತು
Sania-Mirza1

Sania-Mirza2

 

.ಫೆಡರರ್ ಕ್ವಾರ್ಟರ್ ಫೈನಲ್ಗೆಐದು ಬಾರಿ ಚಾಂಪಿಯನ್ ರೋಜರ್ ಫೆಡರರ್ ಆರನೇ ಬಾರಿಗೆ ಯುಎಸ್ ಓಪನ್ನಲ್ಲಿ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದು, ಪಂದ್ಯಾವಳಿಯಲ್ಲಿ ಕ್ವಾರ್ಟರ್ ಪೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಕಳೆದ ೧೧ ವರ್ಷಗಳಲ್ಲಿ ರೋಜರ್ ಫೆಡರರ್ ಅವರು ೧೦ನೇ ಬಾರಿ ಯುಎಸ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈಗ ಫೆಡರರ್ ಫ್ರಾನ್ಸ್ ನ ಸ್ಟಾರ್ ಆಟಗಾರ ಜೀಲ್ ಮೋನ್ಫಿಲ್ಸ್ ಅವರನ್ನು ಎದುರಿಸಲಿದ್ದಾರೆ

 

By suddi9

Leave a Reply

Your email address will not be published. Required fields are marked *