ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಆಯೋಜಿಸದ್ದ ‘ಅಭಿವ್ಯಕ್ತಿ 2018’ ಕಾರ್ಯಕ್ರಮವನ್ನು ಕಲಾವಿದೆ ದೀಪ್ತಿ ಬಾಲಕೃಷ್ಣ ಕುವೆಂಪು ಸಭಾಭವನದಲ್ಲಿ ಉದ್ಘಾಟಿಸಿದರು.

kannada abhiyakthi (1)
ಅಭಿವ್ಯಕ್ತಿ ನಮ್ಮ ಸ್ವಾತಂತ್ರ್ಯ. ನಾವು ಅದನ್ನು ನಮ್ಮ ಜೀವನದಲ್ಲಿ ಉಪಯೋಗಿಸಿಕೊಳ್ಳಲೇ ಬೇಕು. ಆದರೆ ಅಭಿವ್ಯಕ್ತಿಯನ್ನು ಹೊರಹಾಕುವ ಮೊದಲು ನಮ್ಮಲ್ಲಿರುವ ಕೀಳರಿಮೆಯನ್ನು ಹೊರಹಾಕಿಕೊಳ್ಳಬೇಕು ಎಂದು ಹೇಳಿದರು.
ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಅಭಿವ್ಯಕ್ತಿ ಮುಖ್ಯ. ಸಂಸ್ಕøತಿಯ ಪ್ರತೀಕದತ್ತ ನಾವು ಬೆಳಯುತ್ತಾ, ವಿವೇಚನಾ ಮೌಲ್ಯವಾದ ಯೋಚನೆಯ ಮೂಲಕ ಅಭಿವ್ಯಕ್ತಿಯನ್ನು ನಾವು ಪ್ರಚುರಪಡಿಸಿಕೊಳ್ಳಬೇಕು ಎಂದರು.

kannada abhiyakthi (2)
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಕುರಿಯನ್ ಮಾತನಾಡಿ, ಒಬ್ಬ ವ್ಯಕ್ತಿಗೆ ನಿಜವಾದ ಮೂರ್ತರೂಪ ಲಭಿಸುವುದು ಅಭಿವ್ಯಕ್ತಿಯ ನೆಲೆಯಿಂದ. ನಮ್ಮೊಳಗಿನ ಅಂತರ್ಮುಖಿ ಚಿಂತನೆಯೊಂದಿಗೆ ಬಹಿರ್ಮುಖಿಯಾಗಿ ಇತರರೊಂದಿಗೆ ಬೆರೆತಾಗ ಇನ್ನಷ್ಟು ಗಟ್ಟಿತನ ಉಂಟಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ ಚಂದ್ರಶೇಖರ ಗೌಡ ಪ್ರಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ಸಿಂಧೂ ಹೆಗ್ಡೆ ನಿರೂಪಿಸಿದರು. ಉಪನ್ಯಾಸಕ ಹರೀಶ್ ಟಿ.ಜಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

By suddi9

Leave a Reply

Your email address will not be published. Required fields are marked *