ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯಲ್ಲಿ ಕಡಲಕೆರೆಯಲ್ಲಿ ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಮಿತಿ ನೂತನ ಅಧ್ಯಕ್ಷರಾಗಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಕಂಬಳ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮಾಜಿ ಸಚಿವ, ಕೆ.ಅಭಯಚಂದ್ರ ಜೈನ್ ಅವರು ಅಧಿಕಾರ ಹಸ್ತಾಂತರಿಸಿದರು. ಸಮಿತಿಯ ಪ್ರಮುಖರಾದ ಗುಣಪಾಲ ಕಡಂಬ, ಭಾಸ್ಕರ ಕೋಟ್ಯಾನ್ ಉಪಸ್ಥಿತರಿದ್ದರು.
ಕಂಬಳ ಎಂಬುದು ಜೂಜಲ್ಲ. ಅದು ಜನಪದ ಕಲೆ, ಕ್ರೀಡೆ, ತುಳುನಾಡಿನ ಪರಂಪರೆಯ ಭಾಗವಾಗಿರುವ ಕಂಬಳವನ್ನು ಉಳಿಸುವ ಜವಾಬ್ದಾರಿ ತುಳುವರದು. ಈ ನಿಟ್ಟಿನಲ್ಲಿ ನಾನು ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷನಾಗಿ ಕಂಬಳ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಮಾನಾಥ ಕೋಟ್ಯಾನ್ ತಿಳಿಸಿದರು.
