ಉಡುಪಿ: ಎಮ್.ಜಿ.ಎಂ ಕಾಲೇಜು ರಾಷ್ಟೀಯ ಸೇವಾ ಯೋಜನೆ ಮತ್ತು ದಿವ್ಯಾಸ್ ಯೋಗ ಮತ್ತು ಸತ್ಸಂಗ ಇದರ ವತಿಯಿಂದ “ದಿವ್ಯಾಸ್ ವಿದ್ಯಾರ್ಥಿ ಪ್ರಶಸ್ತಿ-2018” ವಿವಿಧ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಕಾಲೇಜಿನ ಆಡಿಯೋ ವಿಜ್ವಲ್ ಸಭಾಂಗಣದಲ್ಲಿ ಆ.25 ರಂದು ನಡೆಯಿತು.

rss udupi
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ||ಹೆಚ್ ಶಾಂತರಾಮ್, ಇಂದಿನ ಶಿಕ್ಷಣ ಪದ್ದತಿ ಕೇವಲ ಅಂಕಗಳಿಗೆ ಸೀಮಿತವಾಗಿದೆ ವಿದ್ಯಾರ್ಥಿಗಳು ಇದರೊಂದಿಗೆ ಇತರ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ|| ಎಮ್.ವೈ ವಿಜಯ ವಹಿಸಿ ಶುಭ ಹಾರೈಸಿದರು, ಮುಖ್ಯ ಅತಿಥಿಗಳಾಗಿ ಜೇಸಿಐ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭುಕರ್ವಾಲು, ದಿವ್ಯಾಸ್ ಸಂಸ್ಥೆಯ ಉಪಾಧ್ಯಕ್ಷೆ ಶೋಭಾ ಭಾಸ್ಕರ್, ರಾಕೇಶ್ ಶೆಟ್ಟಿ, ಎನ್.ಎಸ್.ಎಸ್‍ಯೋಜನಾಧಿಕಾರಿ ಶಮಂತ್‍ಕೆ.ಎಸ್ ಮತ್ತಿತರರು ಉಪಸ್ಥಿತರಿದ್ದರು. ಶ್ರೇಯಸ್ ವಂದಿಸಿದರು.

By suddi9

Leave a Reply

Your email address will not be published. Required fields are marked *