ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ವಲಯ ಇದರ ವತಿಯಿಂದ ಸ್ವಸಹಾಯ ತಂಡದ ಫಲಾನುಭವಿಗಳಿಗೆ ಲಾಡಿಗುತ್ತು ಪಾಶ್ರ್ವನಾಥ್ ಬಲ್ಲಾಳ್ ಅವರ ಮನೆಯಲ್ಲಿ ಯೋಜನೆಯ ಕೇಂದ್ರ ಸಮಿತಿ ಉಪಾಧ್ಯಕ್ಷ ಸತೀಶ್ ಕೋಟ್ಯಾನ್ ಮಂಗಳವಾರ ಗೇರು ಸಸಿಗಳನ್ನು ವಿತರಿಸಲಾಯಿತು.

geru sasi (2)

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಶಶಿಕಿರಣ್ ಗೇರುಕೃಷಿಯ ಬಗ್ಗೆ ಮಾಹಿತಿ ನೀಡಿ ಲಾಭದಾಯಕ ಕೃಷಿಯಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಇಳುವರಿಯನ್ನು ಗೇರು ಕೃಷಿಯಿಂದ ಪಡೆಯಬಹುದಾಗಿದ್ದು ಇದರಿಂದ ಕೃಷಿಕರು ಅಭಿವೃದ್ಧಿಯನ್ನು ಹೊಂದಲು ಸಾಧ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗೇರು ಮೂಲ ಉತ್ಪಾದನೆಯು ಕಡಿಮೆಯಾಗಿದ್ದು ಗೇರು ಕಾರ್ಖಾನೆಗಳ್ಲಿ ದುಡಿಯುವ ಮಹಿಳೆಯರಿಗೆ ಕೆಲಸದ ಅವಕಾಶಗಳು ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೇರು ಕೃಷಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ ಅವರು ಸಾಂದ್ರ ಪದ್ಧತಿಯಲ್ಲಿ ಗಿಡಗಳನ್ನು ನೀಡಬೇಕೆಂದು ತಿಳಿಸಿದರು.

geru sasi (1)

ಮೂಡುಬಿದಿರೆ ಒಕ್ಕೂಟದ ಅಧ್ಯಕ್ಷ ಸೋಮನಾಥ ಪೂಜಾರಿ, ಮೂಡುಬಿದಿರೆ ಒಕ್ಕೂಟದ ಸೇವಾ ಪ್ರತಿನಿಧಿ ಅನಿತಾ ಪಿ. ಬಲ್ಲಾಳ್, ಕೊಡಂಗಲ್ಲು ಒಕ್ಕೂಟದ ಸೇವಾ ಪ್ರತಿನಿಧಿ ಮಮತ, ತಾಂತ್ರಿಕ ತರಬೇತುದಾರ ರವಿ ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯೋಜನೆಯ ವಲಯ ಮೇಲ್ವೀಚಾರಕಿ ಗೀತಾ ಸ್ವಾಗತಿಸಿ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *