ಮೂಡುಬಿದಿರೆ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಮೂಡುಬಿದರೆ ಶಾಖೆಯ ವತಿಯಿಂದ ಸಂಸ್ಥೆಯ ಎಂಡಿ ಜಾರ್ಜ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಪ್ರಜ್ಞಾ ಸಲಹಾ ಫಿಟ್ ಸಂಸ್ಥೆಯ 48 ಅನಾಥ ವಿದ್ಯಾರ್ಥಿಗಳಿಗೆ ಬೆಡ್ ಶೀಟ್ ಹಾಗೂ ಸ್ವೆಟರ್‍ನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಾವೆರಪುರ ಚರ್ಚ್‍ನ ಧರ್ಮಗುರು ಫಾ| ರಾಕೇಶ್ ಮ್ಯಾಥ್ಯೂ, ಶಿಕ್ಷಕಿ ಪೌಲೀನ್ ಡಿ’ಸೋಜಾ, ಪ್ರಜ್ಞಾ ಫಿಟ್ ಸಂಸ್ಥೆಯ ಮುಖ್ಯಸ್ಥೆ ಭವ್ಯಾ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಮೂಡುಬಿದರೆ ಶಾಖೆಯ ಪ್ರಬಂಧಕ ಅವಿನಾಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

