ಕೈಕಂಬ: ಗುರುಪುರ ಕೈಕಂಬ ಸಮೀಪದ ಪಾಂಪೆ ಇಂಗ್ಲೀಷ್ ಮಾಧ್ಯಮ ಶಾಲೆಗೆ ಹೋಗುವ ರಸ್ತೆಯಲ್ಲಿ ಕೊಳೆತು ನಾರುವ ಕೊಚ್ಚೆಕಸಗಳಿಂದ ಕೂಡಿದ ಕಸದ ತ್ಯಾಜ್ಯ ಕಂಡುಬಂದಿದ್ದು ಸುತ್ತಲೂ ರೋಗದ ಭೀತಿ ಉಂಟಾಗಿದೆ. ಈ ಪರಿಸರದಲ್ಲಿ ಮೂಗು ಮುಚ್ಚುವ ಪರಿಸ್ಥಿತಿ ಉಂಟಾಗಿದ್ದು ಮಕ್ಕಳು ಶಾಲೆಗೆ ತೆರಳಲು ಹೆದರುತ್ತಿದ್ದಾರೆ.

3 vp kaikamba thyajea

ಈ ಕಸದ ರಾಶಿಯನ್ನು ಬೀದಿನಾಯಿಗಳು, ಉಂಡಾಡಿ ದನಗಳು ತಿಂದು ರೋಗವನ್ನು ಊರಿಡೀ ಪಸರಿಸುತ್ತಿದೆ. ಈ ಭಾಗಕ್ಕೆ ಎಲ್ಲೆಲ್ಲಿಂದ ಬಂದು ಕಸ ತಂದು ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಈ ಕಸದ ದೆಸೆಯಿಂದ ಶಾಲಾಮಕ್ಕಳಿಗೆ ಈಗಾಗಲೇ ಹಲವಾರು ಸಾಂಕ್ರಾಮಿಕ ರೋಗಗಳು ಬರುತ್ತಿವೆ. ಇದರ ಕೊಳೆತ ವಾಸನೆಯಿಂದ ಮಕ್ಕಳು ಮೂಗು ಮುಚ್ಚಿ ಮೂಗಿಗೆ ಕೈ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ . ಅಲ್ಲದೆ ಮಕ್ಕಳಿಗೆ ಆಡಲೂ ಕೂಡಾ ತಾಪತ್ರಯ ಎದುರಾಗಿದ್ದು, ಮಕ್ಕಳು ಬೇರೆ ಬೇರೆ ಕಾರಣ ನೀಡಿ ರಜೆ ಹಾಕುತ್ತಿದ್ದಾರೆ ಎಂದು ಮಕ್ಕಳ ಹೆತ್ತವರು ಆರೋಪಿಸಿದ್ದಾರೆ.
ಈಗಾಗಲೇ ಮಲೇರಿಯಾ, ಇಲಿ ಜ್ವರದ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಆಯಾಯಾ ಗ್ರಾಮಪಂಚಾಯತ್ಗಳಿಗೆ ಈ ಬಗ್ಗೆ ಸೂಚನೆ ನೀಡಿದೆ. ಈ ರಸ್ತೆಯಲ್ಲಿ ಅನೇಕ ಜನಪ್ರತಿಧಿಗಳು ಹೋಗುತ್ತಿದ್ದು ಅವರೆಲ್ಲಾ ಕಣ್ಣಿದ್ದೂ ಕುರುಡರಂತೇ ವತರ್ಿಸುತ್ತಿದ್ದಾರೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾದ ಸ್ಥಳೀಯ ಅಧಿಕಾರಿಗಳು ಕೈಕಂಬದಲ್ಲಿ ಕಸ ಹಾಕಲು ಇದುವರೆಗೂ ಯಾವುದೇ ಕ್ರಮಕೈಗೊಳ್ಳದಿರುವುದಕ್ಕೆ ಈಗಾಗಲೇ ಸ್ಥಳೀಯರು ಗರಂ ಆಗಿದ್ದಾರೆ. ಅಲ್ಲದೆ ಈ ಭಾಗಕ್ಕೆ ನಾಲ್ಕು ಪಂಚಾಯತ್ಗಳು ಸಂಬಂಧಪಟ್ಟಿದ್ದು, ಅವೆಲ್ಲಾ ಕಸದ ತೊಟ್ಟಿ ಕೂಡಾ ಅಳವಡಿಸಲು ಮನಸ್ಸು ಮಾಡಿಲ್ಲ. ಈ ಬಗ್ಗೆ ಪಂಚಾಯತ್ ಹಾಗೂ ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *