ವಿಟ್ಲ: ವಿಠಲ ಪದವಿಪೂರ್ವ ಕಾಲೇಜಿನಲ್ಲಿ “ಮೊಟಿವೇಷನ್ ಆಪ್ ದಿ ಸ್ಟೂಡೆಂಟ್” ಎಂಬ ವಿಷಯದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಅ.24 ಶುಕ್ರವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂಗಾಳಿ ಮೂಲದ ವಾಗ್ಮಿ, ವಿಡಿಯಂ ಹಾಗೂ ಎನ್.ಜಿ.ಓ ನ ಸ್ಥಾಪಕ ಆಚಾರ್ಯ ಅಜಿತ್ ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಎದೆಗುಂದದೆ ಯಶಸ್ಸಿಗಾಗಿ ಮುಂದುವರಿಯಾಬೇಕಾದರೆ ತಾಳ್ಮೆ ಅತೀ ಅಗತ್ಯ. ನಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚಿಸಗಬೇಕು. ಹಾಗೆಯೇ ನಾನು ಎನ್ನುವ ಅಹಂಕಾರ ಕಡಿಮೆಯಾಗಿ ಭಾವನ್ಮಾತಕ ಸಂಬಂಧಗಳು ಬೆಳೆಯಬೇಕು. ಪ್ರತಿಯೊಬ್ಬನ ತನ್ನ ಸ್ವಂತ ತನದ ಅಭಿವೃಧ್ಧಿಯ ಜೊತೆಗೆ ಉಳಿದ ವ್ಯಕ್ತಿಗಳಿಗೂ ಪ್ರೇರಣೆಯಾಗಬೇಕು. ಕಷ್ಟ ಬಂದಾಗ ಕುಗ್ಗದೆ ಧೈರ್ಯದಿಂದ ಮುಂದುವರಿಯಬೇಕು. ಪುಸ್ತಕ, ಪ್ರತಿಕೆಗಳನ್ನು ಓದಿ ಜ್ಞಾನವನ್ನು ಉತ್ತಮಗೊಳಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಎಲ್.ಎನ್. ಕೂಡೂರು, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಪ್ರಭಾರ ಪ್ರಾಂಶುಪಾಲ ಅಣ್ಣಪ್ಪ ಸಸ್ತಾನ್ ಉಪಸ್ಥಿತರಿದ್ದರು.
ಇಂಗ್ಲೀಷ್ ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ಇಂಗ್ಲೀಷ್ ಉಪನ್ಯಾಸಕಿ ಪೂರ್ಣಿಮ ಕಾರ್ಯಕ್ರಮ ನಿರೂಪಿಸಿದರು. ಗಣಕಶಾಸ್ತ್ರ ಉಪನ್ಯಾಸಕ ಚಂದ್ರಕಾಂತ್ ವಂದಿಸಿದರು.
