ಮೂಡಬಿದಿರೆ:ಮೂಡಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲೆ ಇದರ ಅಶ್ರಯದಲ್ಲಿ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲಾ ಮೈದಾನದಲ್ಲಿ ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲೆಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಜಿಲ್ಲ್ಲಾ ಮಟ್ಟಕ್ಕೆ ಅಯ್ಕೆಯಾದರೆ, ಅಳ್ವಾಸ್ ಶಾಲೆ ದ್ವೀತಿಯ ಸ್ಥಾನವನ್ನು ಪಡೆದು ಕೊಂಡಿದೆ.

kabbadi
ಪ್ರಾಥಮಿಕ ವಿಭಾಗದ ಬಾಲಕರ ವಿಭಾಗದಲ್ಲಿ ಅಳ್ವಾಸ್ ಶಾಲೆ ಪ್ರಥಮ ಸ್ಥಾನಿಯಾದರೆ ಕಡಂದಲೆ ವಿಧ್ಯಾಗಿರಿ ಸ ಹಿ ಪ್ರಾ.ಶಾಲೆ ದ್ವೀತಿಯಾ ಸ್ಥಾನ ಗಳಿಸಿದರು.ಬಾಲಕಿಯರ ವಿಭಾಗದಲ್ಲಿ ಬೆಳುವಾಯಿ ಸ.ಮಾ.ಹಿ ಪ್ರಾ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ದ್ವೀತಿಯ ಸ್ಥಾನವನ್ನು ಪುತ್ತಿಗೆ ಸಹಿಪ್ರಾ ಶಾಲೆ ಪಡೆದುಕೊಂಡಿದೆ.
ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಅಳಿಯೂರು ಸ.ಪ್ರೌಡ ಶಾಲೆ ಪ್ರಥಮ ಸ್ಥಾನಿಯನ್ನು ಪಡೆದರೆ , ದ್ವೀತಿಯ ಸ್ಥಾನವನ್ನು ಕಲ್ಲಬೆಟ್ಟು ಮೊರರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡರು.
ಪಂದ್ಯಾಟದ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲೆಯ ಸಂಚಾಲಕ ಸುದರ್ಶನ ಶೆಟ್ಟಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮುಂಡ್ಕೂರು ಕಡಂದಲೆ ಲಯನಸ್ ಕ್ಲಬಿನ ಅಧ್ಯಕ್ಷ ವಿಕಾಸ್ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಪ್ರಶಾಂತ್ ಜೈನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಭಟ್, ಪ್ರಸಾದ್ ಶೆಟ್ಟಿ, ವೆಂಕಟೇಶ್ ಭಟ್, ವಿನಯ ಕುಮಾರ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಸುಧಾಕರ ಬಿ, ದೈಹಿಕ ಶಿಕ್ಷಕ ಭಾಸ್ಕರ್ , ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *