ಬಂಟ್ವಾಳ: ಸೆ.3ರಂದು ನಡೆಯಲಿರುವ ಶ್ರೀರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕದ ದಶಮಾನೋತ್ಸವ ಅಂಗವಾದ ರಾಷ್ಟ್ರೀಯ ಧರ್ಮ ಸಂಸದ್ ಯಶಸ್ಸಿಗಾಗಿ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ವ್ಯವಸ್ಥೆಗಳು ಸಜ್ಜುಗೊಂಡಿದೆ ಎಂದು ರಾಷ್ಟ್ರೀಯ ಧರ್ಮ ಸಂಸದ್ ಬಂಟ್ವಾಳ ತಾಲ್ಲೂಕು ಸಮಿತಿ ಅಧ್ಯಕ್ಷ ಕೇಶವ ಶಾಂತಿ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಟ್ಟು 50ಸಾವಿರ ಮಂದಿ ಭಾಗವಹಿಸುವ ಈ ಸಮ್ಮೇಳನದಲ್ಲಿ ಈಗಾಗಲೇ 350ಕ್ಕೂ ಮಿಕ್ಕಿ ಮಂದಿ ಸಾಧು ಸಂತರು ದೇಶದ ವಿವಿಧೆಡೆಯಿಂದ ಬರುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಈ ಸಮ್ಮೇಳನ ಪ್ರಮುಖ ಪಾತ್ರವಹಿಸಲಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಸಂಚಾಲಕ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಕಾರ್ಯಾಧ್ಯಕ್ಷ ಬೇಬಿ ಕುಂದರ್, ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಉಪಾಧ್ಯಕ್ಷ ವಿಶ್ವನಾಥ ಬಿ. ಪ್ರಮುಖರಾದ ಗೋಪಾಲ ಸುವರ್ಣ, ಪ್ರಸಾದ್ ಗಾಣಿಗ ಉಪಸ್ಥಿತರಿದ್ದರು.
